ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯನ್ನು, ಅದ್ಧೂರಿಯಾಗಿ ಶುಕ್ರವಾರ ವಿದಾಯ ಹೇಳುವ ಮೂಲಕ ಹುಬ್ಬಳ್ಳಿ ಜನತೆ ಸಾಕ್ಷಿಯಾಯಿತು.
ಹೌದು, ನಗರದ ದಾಜೀಬಾನ್ ಪೇಟೆಯ ಹುಬ್ಬಳ್ಳಿ ಕಾ ರಾಜಾ, ಮರಾಠಾ ಗಲ್ಲಿ ಚಾ ಮಹಾರಾಜ್, ದುರ್ಗದಬೈಲ್, ವಿದ್ಯಾನಗರ, ಅಕ್ಕಿಹೊಂಡ, ಬಾಣಿಓಣಿ, ಕೊಪ್ಪಿಕರ ರೋಡ್, ಹೊಸೂರ, ಉಣಕಲ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆಯು ಸಾವಿರಾರು ಜನರ ಸಮ್ಮುಖದಲ್ಲಿ ನೋಡಗರು ಗಮನ ಸೆಳೆಯುವಂತೆ ಮಾಡಿತು.
ಮಹಾರಾಷ್ಟ್ರ ಬಳಿಕ ಅತಿ ಹೆಚ್ಚು ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆಯನ್ನು ಹುಬ್ಬಳ್ಳಿಯಲ್ಲಿ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಡಿಜೆ ಹಾಡಿಗೆ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಹಾಗೂ ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ವಿಸರ್ಜನಾ ಮೆರವಣಿಗೆಯಲ್ಲಿ ಝಾಂಜ್, ವಾದ್ಯ ಮೇಳ, ಡೊಳ್ಳು, ಹೆಜ್ಜೆ ಮಜಲು, ಗೊಂಬೆ ಕುಣಿತ, ಲೈಟಿಂಗ್ ಹಾಗೂ ಡಿಜೆ ಹಾಡುಗಳಿಂದ ಗಮನ ಸೆಳೆಯುವ ಬೃಹತ್ ಗಾತ್ರದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಅಷ್ಟೇ ಅಲ್ಲದೇ ಅನ್ಯ ಜಿಲ್ಲಗಳಿಂದ ಸಾವಿರಾರು ಜನರು ಆಗಮಿಸಿದ್ದು ಕಂಡು ಬಂದಿದ್ದು, ಗಣೇಶನ ವಿಸರ್ಜನೆಯ ಸಂಭ್ರಮದಲ್ಲಿ ಲಕ್ಷಾಂತರ ಜನರು ಸಾಕ್ಷಿಯಾಗಿದ್ದು, ಕಂಡು ಬಂದಿತು.
ಸಾವಿರಾರು ಜನರು ಸಮ್ಮುಖದಲ್ಲಿ ಸುಮಾರು 10 ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ಭಾಗ್ಯ ಕರುಣಿಸಿದ್ದ ಗಣೇಶನ ಮೂರ್ತಿಗಳನ್ನು ನಗರದ ಹೊಸೂರ ಬಾವಿ, ಇಂದಿರಾ ಗಾಜಿನ ಮನೆ ಆವರಣದ ಬಾವಿಯಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಮಾಡುವ ಮೂಲಕ ವಿಜೃಂಭಣೆಯಿಂದ ಗಣೇಶನಿಗೆ ವಿದಾಯ ಹೇಳಲಾಯಿತು.
Kshetra Samachara
10/09/2022 04:23 pm