ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭಾವೈಕ್ಯತೆಗೆ ಸಾಕ್ಷಿಯಾದ ಘಂಟಿಕೇರಿ ಗಣಪತಿ; ಸೌಹಾರ್ದತೆಯೇ ಸಂಘಟನೆಯ ಶಕ್ತಿ.!

ಹುಬ್ಬಳ್ಳಿ: ಗಣಪತಿ ಬಪ್ಪ ಮೋರಯಾ... ಗಣಪತಿ ಬಪ್ಪ ಮೋರಯಾ.. ವಾಣಿಜ್ಯನಗರಿ ಹುಬ್ಬಳ್ಳಿಯ ಗಣೇಶೋತ್ಸವ ಅಂದರೆ ಅದೊಂದು ವಿಶಿಷ್ಟ ಆಚರಣೆ. ಅದರಲ್ಲೂ ಹುಬ್ಬಳ್ಳಿಯ ಘಂಟಿಕೇರಿಯ ಗಣೇಶನ ವಿಸರ್ಜನೆ ಅಂದರೆ ಅದನ್ನು ಬಾಯಿ ಮಾತಿನಲ್ಲಿ ಹೇಳಲು ಸಾಲದು. ಹಾಗಿದ್ದರೇ ಬನ್ನಿ ಹುಬ್ಬಳ್ಳಿಯ ಘಂಟಿಕೇರಿ ಗಜಾನನೋತ್ಸವದ ವೈಶಿಷ್ಟ್ಯವನ್ನು ಕಣ್ಣು ತುಂಬಿಕೊಂಡು ಬರೋಣ..

ಹೀಗೆ ಮುಗಿಲೆತ್ತರಕ್ಕೆ ಹಾರಿ ಚದುರುವ ಪಟಾಕಿ. ಎಲ್ಲೆಡೆಯೂ ಗಜಾನನ ಸ್ತುತಿ. ಮಹಿಳೆಯರು, ಮಕ್ಕಳು, ವೃದ್ಧರು ಅವರಿವರೆನ್ನದೇ ಎಲ್ಲರೂ ಒಟ್ಟಾಗಿ ಆಚರಣೆ ಮಾಡುತ್ತಿರುವ ಸೌಹಾರ್ದತೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಘಂಟಿಕೇರಿ. ಹೌದು... ಸುಮಾರು 38 ವರ್ಷಗಳಿಂದ ಘಂಟಿಕೇರಿ ಗಜಾನನೋತ್ಸವ ಸಮಿತಿ ಎ ವಿಭಾಗದಿಂದ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿನೂತನ ಹಾಗೂ ವೈಶಿಷ್ಟ್ಯ ಪೂರ್ಣ ಗಣೇಶೋತ್ಸವ ಆಚರಣೆಯಾಗಿದೆ. ವರಸಿದ್ಧಿ ವಿನಾಯಕ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಬೇಡಿದ ವರವನ್ನು ನೀಡುತ್ತಾನೆ‌ ಎಂಬುವುದು ಇಲ್ಲಿನ ಜನರ ನಂಬಿಕೆ. ಹನ್ನೊಂದು ದಿನಗಳು ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿರುವ ಭಕ್ತರು ಅದ್ದೂರಿಯಿಂದ ವಿಸರ್ಜನೆಗೆ ಮುನ್ನುಡಿ ಬರೆದಿದ್ದಾರೆ. ಈ ಉತ್ಸವದ ಕುರಿತು ಜನತೆಗೆ ಸಹಕಾರ ನೀಡಿದ ಸಹೃದಯಿಗಳಿಗೆ ಉತ್ಸವ ಸಮಿತಿಯ ಅಧ್ಯಕ್ಷರು ಧನ್ಯವಾದಗಳು ತಿಳಿಸಿದ್ದಾರೆ.

ಇನ್ನೂ ಡಿಜೆ, ಪಟಾಕಿ, ಪುಷ್ಪ ಮಳೆಯ ಮೂಲಕ ಪೂಜೆ ಸಲ್ಲಿಸಿದ್ದು, ಎಲ್ಲರ ಸಹಭಾಗಿತ್ವದಲ್ಲಿ ವರಸಿದ್ಧಿ ವಿನಾಯಕನಿಗೆ ನಮನ ಸಲ್ಲಿಸಿದರು. ಈಗಾಗಲೇ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿರುವ ಘಂಟಿಕೇರಿ ಗಣಪತಿಯ ಉತ್ಸವಕ್ಕೆ ಅಧ್ಯಕ್ಷರಾದ ವಿರೂಪಾಕ್ಷಪ್ಪ ತೆಗ್ಗಿನಮನಿ, ಕಾರ್ಯದರ್ಶಿ ಸಜೇಂದ್ರ ಬ್ಯಾಹಟ್ಟಿ ಹಾಗೂ ಸಂಘದ ಸರ್ವ ಸದಸ್ಯರ ಉತ್ತಮ ರೀತಿಯಲ್ಲಿ ಶ್ರಮಿಸಿ ಯಶಸ್ವಿಯಾಗಿ ಮಾಡಿದ್ದಾರೆ.

ಒಟ್ಟಿನಲ್ಲಿ ಯಾವುದೇ ಜಾತಿ ಮತ ಬೇಧವಿಲ್ಲದೇ 38 ವರ್ಷದಿಂದ ಯಶಸ್ವಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಇಷ್ಟಾರ್ಥಗಳನ್ನು ಈಡೇರಿಸುವ ಗಜಾನನ ಉತ್ಸವವನ್ನು ಎಲ್ಲರೂ ಮನೆಯ ಮಂದಿಯಂತೆ ವಠಾರದ ಜನರು ಮಾಡುತ್ತಿರುವುದು ವಿಶೇಷವಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/09/2022 09:37 pm

Cinque Terre

132.16 K

Cinque Terre

1

ಸಂಬಂಧಿತ ಸುದ್ದಿ