ನವಲಗುಂದ: ನವಲಗುಂದ ಪಟ್ಟಣದಲ್ಲಿ 25 ಕ್ಕೂ ಹೆಚ್ಚು ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದರ ಪ್ರಯುಕ್ತ ಗುರುವಾರ ಎಂಟನೇ ದಿನದ ಗಣಪತಿ ವಿಸರ್ಜನೆ ಇತ್ತು. ಈ ವೇಳೆ ಬೃಹತ್ ಮೆರವಣಿಗೆ ವೇಳೆ ಡಿಜೆ ಸೌಂಡ್ ನ ನಡುವೆ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅವರ ಹಾಡಿಗೆ ಸಾರ್ವಜನಿಕರು ಧ್ವನಿಗೂಡಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೊರಟ ಬೃಹತ್ ಮೆರವಣಿಗೆಯಲ್ಲಿ ಡಿಜೆ ಅಬ್ಬರ ಜೋರಾಗಿತ್ತು. ಈ ವೇಳೆ ಕರ್ನಾಟಕದ ಅಪ್ಪು ದಿವಂಗತ ಪುನೀತ್ ರಾಜಕುಮಾರ ಅವರ ಹಾಡಿಗೆ ಯುವಕರು, ವೃದ್ಧರು, ಮಕ್ಕಳು ಧ್ವನಿಗೂಡಿಸಿ, ಮೊಬೈಲ್ ಟಾರ್ಚ್ ಆನ್ ಮಾಡಿ, ಪುನೀತನನ್ನು ನೆನೆದ್ದದ್ದು, ವಿಶೇಷವಾಗಿತ್ತು.
Kshetra Samachara
09/09/2022 10:58 am