ಹುಬ್ಬಳ್ಳಿ: ದೇಶದಾದ್ಯಂತ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಜನರು ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಕೋಮು ಭಾವನೆ ಕಿಚ್ಚು ಹೆಚ್ಚಾಗುತ್ತಿದೆ. ಆದರೆ ಹುಬ್ಬಳ್ಳಿ ತಾಲೂಕಿನ ಈ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಂದೂ ಹಾಗೂ ಮುಸ್ಲಿಮರು ಇಬ್ಬರು ಸೇರಿಕೊಂಡು ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಹೋದರತ್ವಕ್ಕೆ ಕಾರಣವಾಗಿದ್ದಾರೆ.
ಹೌದು, ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಕೆಳಗಿನ ಓಣಿಯಲ್ಲಿ ಹಿಂದೂ ಮುಸ್ಲೀಮರು ಒಟ್ಟಿಗೆ ಸೇರಿ ವಿಘ್ನವಿನಾಶಕನಿಗೆ ಒಟ್ಟಾಗಿ ಪೂಜೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ. ಇಲ್ಲಿ ಗಣೇಶೋತ್ಸವ ಕಾರ್ಯಕ್ರಮಕ್ಕೆ ತಳಿರುತೋರಣ ಕಟ್ಟುವವರು ಮುಸ್ಲಿಮರು ಆದರೇ, ಇಫ್ತಾರ್ ಗೆ ಊಟ ಬಡಿಸುವವರು ಇಲ್ಲಿನ ಹಿಂದೂಗಳಾಗಿದ್ದಾರೆ. ಗಣಪತಿ ಪ್ರತಿಷ್ಠಾಪನೆ ಬಳಿಕ ನಿತ್ಯವೂ ಹಿಂದೂ ಮುಸ್ಲಿಂ ಮಹಿಳೆಯರು, ಪುರುಷರು ಒಟ್ಟುಗೂಡಿ ಪೂಜೆ ಮಾಡತ್ತಾರೆ. ಅಷ್ಟೇ ಅಲ್ಲದೇ ಗಣೇಶನ ಮುಂದೆ ನಮಾಜ್ ಮಾಡುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕಳೆದ 25 ವರ್ಷಗಳಿಂದ ಸೌಹಾರ್ದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂದು ಸಾರುತ್ತಿದ್ದಾರೆ. ವಿಶೇಷವಾಗಿ ಈ ಬಾರಿ ಬೆಳ್ಳಿಹಬ್ಬದ ಹಿನ್ನೆಲೆ ಬೆಳ್ಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಒಟ್ಟಾರೆ ಧರ್ಮ ಧರ್ಮಗಳ ಕಚ್ಚಾಟದ ನಡುವೆ ಅದೆಷ್ಟೋ ಕೊಲೆಗಳು ನಡೆಯುತ್ತಿವೆ. ಇಂತಹ ದಿನಗಳಲ್ಲಿ ಈ ಗ್ರಾಮದ ಜನತೆ ಗಣೇಶೋತ್ಸವ ಆಚರಣೆ ಮಾಡಿ ನಾವೆಲ್ಲರೂ ಮನುಷ್ಯ ಜಾತಿ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ..
Kshetra Samachara
04/09/2022 03:18 pm