ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್‌ನಿಂದ ಗಣೇಶ ಮೂರ್ತಿ ಬಳಿ ಘೋಷ ವಾದ್ಯ ಮೊಳಗಿಸಲಾಯಿತು.
ಪರ ವಿರೋಧದ ನಡುವೆಯೂ ಹುಬ್ಬಳ್ಳಿ ರಾಣಿ ಚನ್ನಮ್ಮ ಈದ್ಗಾ ಮೈದಾನದಲ್ಲಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ಇಂದು ರಾತ್ರಿ ಆರ್‌ಎಸ್ಎಸ್ ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ಗಣಪತಿ ಮೂರ್ತಿ ಮುಂದೆ ಡ್ರಂ ಬಾರಿಸಿ ಘೋಷ ವಾದ್ಯ ಮಾಡಲಾಯಿತು.
ಇನ್ನು ರಾಣಿ ಚನ್ನಮ್ಮ ಈದ್ಗಾ ಮೈದಾನ ಗಣೇಶೋತ್ಸವದಲ್ಲಿ, ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬಾರದೆಂದು ನಿಬಂಧನೆ ಹಾಕಲಾಗಿತ್ತು. ಅಷ್ಟೇ ಅಲ್ಲದೆ, ಗಣೇಶ ಮೂರ್ತಿ ಬಿಟ್ಟು ಬೇರೆ ಮೂರ್ತಿ ಇಡುವಂತಿಲ್ಲ, ಫೋಟೋ, ಫ್ಲೆಕ್ಸ್ ಅಳವಡಿಸುವಂತಿಲ್ಲ ಅಂತ ಪಾಲಿಕೆ ಷರತ್ತು ಹಾಕಲಾಗಿತ್ತು. ಆದರೆ ನಿನ್ನೆ ಏಕಾಏಕಿ ಸಾವರಕರ್ ಫ್ಲೆಕ್ಸ್ ಮತ್ತು ಫೋಟೋ ಹಾಕಿದ್ದ ಆಯೋಜಕರು, ಇಂದು ಆರ್.ಎಸ್.ಎಸ್ ನಿಂದ ಘೋಷ ವಾದ್ಯ ಮಾಡಿದ್ದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/09/2022 10:59 pm