ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 29ನೇ ತತ್ವಜ್ಞಾನ ಸಮ್ಮೇಳನ, 6 ಧಾರ್ಮಿಕ ಕೇಂದ್ರಗಳು,15 ಪಂಡಿತರ ಪ್ರವಚನ

ಧಾರವಾಡ: ಧರ್ಮ ಮತ್ತು ತತ್ವ ಪ್ರಚಾರಕ್ಕಾಗಿ ಅಖಿಲ ಭಾರತ ಮಾಧ್ವ ಮಂಡಲದಾಶ್ರಯದಲ್ಲಿ 29 ನೇ ತತ್ವಜ್ಞಾನ ಸಮ್ಮೇಳನ ಸೆ.15-18 ರವರೆಗೆ ಅವಳೀ ನಗರದಲ್ಲಿ ನಡೆಯಲಿದೆ.

ಸೆ.1ರಿಂದ ಧಾರವಾಡದ 6 ಧಾರ್ಮಿಕ ಕೇಂದ್ರಗಳಲ್ಲಿ ಸುಮಾರು 15 ಪಂಡಿತರಿಂದ ಏಕಕಾಲಕ್ಕೆ ಪ್ರವಚನ ನಡೆಯುತ್ತದೆ. ಆಯಾ ಬಡಾವಣೆಗಳು ಆಸಕ್ತರು ಆಗಮಿಸಬೇಕೆಂದು ಸಂಘಟಕರು ಕೋರುತ್ತಾರೆ.

ಧಾರವಾಡದ ಮಾಳಮಡ್ಡಿ ಉತ್ತರಾದಿ ಮಠ, ಗಾಂಧಿನಗರದ ವೇದವ್ಯಾಸ ವಿದ್ಯಾಪೀಠ, ಯಾಲಕ್ಕಿಶೆಟ್ಟರ ಕಾಲನಿಯ ಶೃಂಗೇರಿ ಶಂಕರ ಮಠ,ದಾಸನಕೊಪ್ಪ ವೃತ್ತದ ಮಾಧ್ವ ವಿದ್ಯಾಪೀಠದ ಶ್ರೀಕೃಷ್ಮ ಮಠ, ದೇಸಾಯಿಗಲ್ಲಿ ವಿಠಲಮಂದಿರ, ನಾರಾಯಣ ಪಾರಾಯಣ ಬಳಗ, ಸತ್ತೂರಿನ ಡಾ.ಕೆ.ಎಂ.ಶ್ರೀನಾಥ ಅವರ ನಿವಾಸ ಈ ಸ್ಥಳಗಳಲ್ಲಿ ಪ್ರವಚನ ನಡೆಯಲಿವೆ.

ಅನೇಕ ಪಂಡಿತೋತ್ತಮರು ಪ್ರವಚನ ನೀಡಲಿದ್ದು ಭಕ್ತಾದಿಗಳು ಆಗಮಿಸಬೇಕೆಂದು ಕೋರಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

31/08/2022 04:38 pm

Cinque Terre

10.98 K

Cinque Terre

0

ಸಂಬಂಧಿತ ಸುದ್ದಿ