ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಐತಿಹಾಸಿಕ ಹಿರಿಮೆಯ ನವಿಲುಗುಂದ ಶ್ರೀ ಗಣಪತಿ ದೇವಸ್ಥಾನ; ಚತುರ್ಥಿಗೆ ಸಹಸ್ರಾರು ಭಕ್ತರ ಆಗಮನ

ನವಲಗುಂದ: ನವಿಲುಗುಂದ ಐತಿಹಾಸಿಕ ಸ್ಥಳಗಳಿಗೆ ಪ್ರಸಿದ್ಧಿ ಪಡೆದ ಊರು. ಈಗ ಈ ಊರಿನ ಇನ್ನೊಂದು ಐತಿಹಾಸಿಕ ದೇವಸ್ಥಾನದ ಬಗ್ಗೆ ಹೇಳುವ ಸಮಯ. ಅದಕ್ಕೆ ಕಾರಣ ಗಣೇಶ ಚತುರ್ಥಿ. ನವಲಗುಂದದ ಗಣಪತಿ ದೇವಸ್ಥಾನ ಇತಿಹಾಸ ಹಿನ್ನೆಲೆಯುಳ್ಳ ದೇವಸ್ಥಾನ. ಇದರ ವಿಶೇಷತೆ ಹಲವು.

ಪಟ್ಟಣದ ವಿನಾಯಕ ಪೇಟೆಯ ಗಣಪತಿ ದೇವಸ್ಥಾನದಲ್ಲಿ ಗಣೇಶ ಹಬ್ಬ ಅತೀ ವಿಜೃಂಭಣೆಯಿಂದ ನೆರವೇರುತ್ತೆ. ಇನ್ನೊಂದು ಮಾತಿನಿಂದ ಹೇಳೋದಾದ್ರೆ ಇಡಗುಂಜಿ ಗಣಪತಿ ದೇವಸ್ಥಾನ ಬಿಟ್ಟರೆ ಎರಡನೇ ಅತೀ ಖ್ಯಾತಿ ಗಳಿಸಿದ ದೇವಸ್ಥಾನ ಇದು. ಇಲ್ಲಿ ಗಣೇಶ ಹಬ್ಬದ ನಿಮಿತ್ತ 8 ದಿನಗಳ ವರೆಗೆ ನಿತ್ಯ ವಾಹನೋತ್ಸವ ನಡೆದು 9ನೇ ದಿನಕ್ಕೆ ಶ್ರೀ ಗಣಪತಿಯ ಮಹಾರಥೋತ್ಸವ ಜರುಗುತ್ತೆ.

ಹಬ್ಬಕ್ಕೆ ಇಲ್ಲಿ ವರ್ಷಕ್ಕೆ ಸಹಸ್ರಾರು ಭಕ್ತರ ಆಗಮನ ಆಗುತ್ತೆ. ವರ್ಷದಿಂದ ವರ್ಷಕ್ಕೆ ವಿಘ್ನೇಶ್ವರನ ದರ್ಶನಕ್ಕೆ ಭಕ್ತರ ಆಗಮನ ಹೆಚ್ಚುತ್ತಲೇ ಇದೆ. ಈ ಗಣಪತಿ ದೇವಸ್ಥಾನದ ಹಿನ್ನೆಲೆ ಹೇಳೋದಾದ್ರೆ 1734ರಲ್ಲಿ ನವಲಗುಂದದ ಅಧಿಪತಿಯಾಗಿದ್ದ ಅವರಾದಿ ವಿಠಲಪ್ಪಗೌಡರ ವಂಶಸ್ಥ 2ನೇ ಜಾಯಗೊಂಡ ಅವರ ಮಾತಿನಂತೆ ಖ್ಯಾತ ಶಿಲ್ಪಿಯಿಂದ ಒಂದೇ ದಿನದಲ್ಲಿ ಶ್ರೀ ವಿನಾಯಕ ಮೂರ್ತಿ ಹಾಗೂ ಮಂದಿರ ನಿರ್ಮಾಣ ಮಾಡಲಾಯಿತು!

ಶಿಲ್ಪಿಯು ಮೂರ್ತಿಯನ್ನು ಪಾದದಿಂದ ಆರಂಭಿಸಿ ದೇಹ, ಮುಖ ರಚಿಸಿ ಪೂರ್ಣಗೊಳಿಸಿದನಂತೆ. ಈ ರೀತಿಯ ರಚನೆಯಿಂದ ಮೂರ್ತಿ ಮಹಿಮೆಗೆ ಸಾಕ್ಷಿಯಾಗುತ್ತದೆ ಎಂದು ಶಿಲ್ಪಿ ಹೇಳಿದನಂತೆ. ಮುಂದೆ ಜಾಯಗೊಂಡರ ವಂಶದ ರಾಜ್ಯಭಾರ ಕೊನೆಗೊಂಡಿತು. ಈ ಶ್ರೀಗಣೇಶನ ಮೂರ್ತಿ ಅಗೋಚರ ಶಕ್ತಿಗೆ ಸಾಕ್ಷಿಯಾಯಿತು.

ವರದಿ-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

30/08/2022 07:24 pm

Cinque Terre

30.22 K

Cinque Terre

1

ಸಂಬಂಧಿತ ಸುದ್ದಿ