ಅಣ್ಣಿಗೇರಿ: ಅಣ್ಣ ತಂಗಿಯರ ಪ್ರೀತಿಯ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಈ ಸಂಬಂಧ ಗಟ್ಟಿಯಾಗಿರಲಿ, ಅಣ್ಣನಿಗೆ ಶ್ರೀರಕ್ಷೆಯಾಗಲಿ ಎಂದು ಅಕ್ಕ ತಂಗಿ ಕಟ್ಟುವ ಈ ರಕ್ಷಾ ಬಂಧನ ನೂಲ ಹುಣ್ಣಿಮೆಯಂದು ಆಚರಿಸುವ ಈ ಹಬ್ಬದ ತಯಾರಿಯೂ ಜೋರಾಗಿದೆ. ಎಲ್ಲೆಡೆ ಮಹಿಳೆಯರು, ಯುವತಿಯರು ಮಾರುಕಟ್ಟೆಯಲ್ಲಿ ರಾಖಿ ಖರೀದಿಗೆ ಮುಂದಾಗಿದ್ದಾರೆ.
ವಿವಿಧ ಮಾದರಿಯ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, 5. 10 ರೂ. ನಿಂದ ಹಿಡಿದು 150, 200, 300 ಹಾಗೂ 500ರೂ. ವರೆಗೆ ಲಭ್ಯ ಇವೆ. ನಾನಾ ಮಾದರಿಯ ಬಣ್ಣದ ರಾಖಿ ಖರೀದಿ ಜೋರಾಗಿ ನಡೆಯುತ್ತಿದೆ. ಒಟ್ಟಿನಲ್ಲಿ ರಕ್ಷಾ ಬಂಧನದ ತಯಾರಿ ಎಲ್ಲೆಡೆ ಜೋರಾಗಿದ್ದು, ಅಣ್ಣ, ತಂಗಿಯರ ಅನುಬಂಧದ ಈ ರ
Kshetra Samachara
11/08/2022 11:46 am