ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಆ.10ಕ್ಕೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಯರಗುಪ್ಪಿ ಮೊಹರಂ

ಕುಂದಗೋಳ : ಎಲ್ಲೆಡೆ ಆಗಸ್ಟ್ 9 ಮಂಗಳವಾರವೇ ಮೊಹರಂ ಹಬ್ಬ ನಡೆದರೇ, ಆ ಒಂದು ಊರಲ್ಲಿ ಒಂದು ದಿನ ತಡವಾಗಿ ಅಂದ್ರೇ ಆಗಸ್ಟ್ 10 ರಂದು ಬುಧವಾರ ಮೊಹರಂ ಹಬ್ಬ ನಡೆಯುತ್ತ ಬಂದಿದ್ದು ಒಂದಲ್ಲಾ ಎರಡಲ್ಲಾ ಏಳು ಡೋಲಿಗಳು ಸೇರುತ್ತವೆ ಹಾಗಾಗಿಯೇ ಆ ಊರಿನ ಐತಿಹಾಸಿಕ ಮೊಹರಂ ಹಬ್ಬದ ಆಚರಣೆ ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿದೆ.

ಕುಂದಗೋಳ ತಾಲೂಕಿನ ಯರಗುಪ್ಪಿ, ಮುಳ್ಳೊಳ್ಳಿ, ಯರಿನಾರಾಯಣಪೂರ, ಚಿಕ್ಕನೇರ್ತಿ ಗ್ರಾಮಗಳ ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಸಾಮರಸ್ಯದ ಭಾವನೆಯಿಂದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ ಮಾಡ್ತಾ ಇದ್ದಾರೆ.

ಯರಗುಪ್ಪಿ ಮಳ್ಳೊಳ್ಳಿ ಮಧ್ಯೆದ ಬೆಣ್ಣೆ ಹಳ್ಳದ ಬಳಿ ಸೇರುವ ಏಳು ಡೋಲಿಗಳನ್ನು ನೋಡಲು ಕರ್ನಾಟಕದಾದ್ಯಂತ ಜನ ಸೇರುತ್ತಾರೆ, ಅಲ್ಲಿನ ಡೋಲಿಗಳ ವೈಭವದ ನೋಡಲು ಎರಡು ಕಣ್ಣು ಸಾಲದು.

ಇನ್ನೂ ಯರಗುಪ್ಪಿ ಗ್ರಾಮದ ಮೊಹರಂ ಜಾತ್ರೆ ಎಂದೇ ಖ್ಯಾತಿ ಪಡೆದಿದ್ದು ಅಲಾವಿ ಹೆಜ್ಜೆ, ಶಕ್ತಿ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜಾನಪದ ಕಲೆಯನ್ನು ಉಳಿಸಿ ಬೆಳೆಸವಲ್ಲಿ ಯರಗುಪ್ಪಿ ಮೊಹರಂ ಪ್ರಮುಖ ಪಾತ್ರ ವಹಿಸಿದೆ.

ಇದಲ್ಲದೆ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದವರಿಗೆ ಬಂಗಾರ, ನಗದು ಹಣ ಸೇರಿದಂತೆ ಯರಗುಪ್ಪಿ ಮೊಹರಂ ಹಬ್ಬದಲ್ಲಿ ಭಾಗವಹಿಸಿದ್ದೇ ಎಂಬುದೇ ಹೆಮ್ಮೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

09/08/2022 08:06 am

Cinque Terre

63.95 K

Cinque Terre

5

ಸಂಬಂಧಿತ ಸುದ್ದಿ