ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅದ್ಧೂರಿ ಪಲ್ಲಕ್ಕಿ ಉತ್ಸವದಲ್ಲಿ ಭಕ್ತರ ಸಡಗರ!

ನವಲಗುಂದ: ಸುಕ್ಷೇತ್ರ ನವಲಗುಂದದ ಶ್ರೀಮತ್ ಪರಮಹಂಸ ಸಚ್ಚಿದಾನಂದ ವಿಶ್ವ ಬ್ರಹ್ಮ ಪಂಚಾನನ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ 141ನೇ ಆರಾಧನಾ ಮಹೋತ್ಸವದ ಅಂಗವಾಗಿ ಸೋಮವಾರ ಪಲ್ಲಕ್ಕಿ ಮತ್ತು ಮೇಣ ಉತ್ಸವ ಜರುಗಿತು.

ನಾಗಲಿಂಗ ಮಹಾಸ್ವಾಮಿಗಳ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನವಲಗುಂದ ತಾಲ್ಲೂಕಿನ ಹಲವೆಡೆಯಿಂದ ಭಕ್ತರು ಆಗಮಿಸಿದ್ದರು. ಈ ವೇಳೆ ಪಲ್ಲಕ್ಕಿ ಉತ್ಸವ ನವಲಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅತೀ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು.

ಪಲ್ಲಕ್ಕಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿ ಮಜ್ಜಲು ಸೇರಿದಂತೆ ಹಲವು ವಾದ್ಯಗಳು ನೆರೆದಿದ್ದ ಭಕ್ತರನ್ನು ಆಕರ್ಷಸುತ್ತಿದ್ದವು. ಪಲ್ಲಕ್ಕಿಗೆ ಭಕ್ತರು ಮುಗಿದು ಬಿದ್ದು, ಪೂಜೆ ಸಲ್ಲಿಸುವ ದೃಶ್ಯಗಳು ಸಹ ಸಹಜವಾಗಿದ್ದವು.

ಇನ್ನೊಂದೆಡೆ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಉಗ್ಗಿ ಪಾಯಸದ ರುಚಿಯೊಂದಿಗೆ ಪ್ರಸಾದದ ವ್ಯವಸ್ಥೆಯನ್ನು ಸಹ ಏರ್ಪಡಿಸಲಾಗಿತ್ತು.

Edited By : Manjunath H D
Kshetra Samachara

Kshetra Samachara

04/07/2022 09:16 pm

Cinque Terre

22.54 K

Cinque Terre

0

ಸಂಬಂಧಿತ ಸುದ್ದಿ