ನವಲಗುಂದ : ನವಲಗುಂದ ಪಟ್ಟಣದ ಸುಪ್ರಸಿದ್ಧ ಶ್ರೀ ಜಗದ್ಗುರು ಅಜಾತ ನಾಗಲಿಂಗ ಸ್ವಾಮಿ ಮಠದ 141ನೇ ಉತ್ಸವದ ಅಂಗವಾಗಿ ಚೌತಿ ದಿವಸ ಭಾನುವಾರ ಮಾದಲಿಯಲ್ಲಿ ನಾಗಲಿಂಗ ಸ್ವಾಮಿ ಸ್ವರೂಪವನ್ನು ಮಾಡಿ, ಅದನ್ನೇ ಭಕ್ತರಿಗೆ ಪ್ರಸಾದವನ್ನಾಗಿ ನೀಡಲಾಯಿತು.
ಹೌದು ಭಾನುವಾರ ಜಾತ್ರೆಯ ಮೊದಲನೇ ನಾಗಲಿಂಗ ಸ್ವಾಮೀಯವರಿಗೆ ರುದ್ರಭಿಷೇಕ, ವಿಶೇಷ ಅಲಂಕಾರದೊಂದಿಗೆ ಸುಮಾರು ಆರು ಕ್ವಿಂಟಲ್ ಗೋದಿಯಿಂದ ನಾಗಲಿಂಗ ಸ್ವಾಮಿಗಳ ವಿಗ್ರಹವನ್ನು ಸಿದ್ದ ಪಡಿಸಿ, ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು.
ನಂತರ ಸಂಜೆ ವೇಳೆಗೆ ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಧಾರ್ಮಿಕ ಮುಖಂಡರು, ಸಾಹಿತಿಗಳು, ಸ್ವಾಮೀಜಿಗಳು ಸೇರಿದಂತೆ ಹಲವರು ಇದ್ದರು.
Kshetra Samachara
03/07/2022 09:45 pm