ಕುಂದಗೋಳ: ಮಳೆಯಿಲ್ಲದೆ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿರುವ ರೈತಾಪಿ ಸಮೂಹ ವರುಣನ ಕೃಪೆಗಾಗಿ ಪುರಾತನ ಆಚರಣೆ ನೆರವೇರಿಸಿದೆ.
ಕುಂದಗೋಳ ಪಟ್ಟಣದ ಸಾದಗೇರಿ ಓಣಿಯ ನಿವಾಸಿಗಳು ಗುರ್ಜಿ ಪೂಜೆ ಕೈಗೊಂಡು ಮಳೆಗಾಗಿ ಪ್ರಾರ್ಥನೆ ಮಾಡಿ ಅಂಬಲಿ ಸಾರು ಅನ್ನಸಂತರ್ಪಣೆ ನೆರವೇರಿಸಿದ್ದಾರೆ.
ಐದು ರೊಟ್ಟಿ ಬೇಯಿಸುವ ತವೆ ಮೇಲೆ ಹಸುಗಳ ಸಗಣಿ ಹಾಕಿ ಆ ಸಗಣಿಗೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಹೂವು, ಮುಖ್ಯವಾಗಿ ಗರಿಕೆ ಪತ್ರೆ ಸಲ್ಲಿಸಿ ಮಹಿಳೆಯರು ಮಕ್ಕಳು ಅದನ್ನು ತಲೆ ಮೇಲೆ ಹೊತ್ತು "ಗುರ್ಜಿ ಗುರ್ಜಿ ಮಳೆ ಸುರಿಸಿ ಗುರ್ಜಿ" ಎಂಬ ಪ್ರಾರ್ಥನೆ ಮಾಡುತ್ತಾರೆ. ನಂತರ ಮಹಿಳೆಯರು ಮಕ್ಕಳ ತಲೆ ಮೇಲಿನ ಗುರ್ಜಿಗೆ ನೀರು ಸುರಿದು ಆರತಿ ಮಾಡುತ್ತಾರೆ.
ಇನ್ನು ರೈತಾಪಿ ಮಹಿಳೆಯರು ಮಳೆಗಾಗಿ ತಾವೇ ಅಂಬಲಿ ಸಾರು ತಯಾರಿಸಿ ಜನರಿಗೆ ಅನ್ನ ಸಂತರ್ಪಣೆ ಮಾಡಿದ್ದಾರೆ. ಒಟ್ಟಿನಲ್ಲಿ ಮಳೆಗಾಗಿ ಅದೆಷ್ಟೋ ಪೂಜೆ ಹರಕೆ ನೆರವೇರುತ್ತಿದ್ದು, ವರುಣ ಕೃಪೆ ತೋರಿದರೆ ರೈತಾಪಿ ಕುಲಕ್ಕೆ ಹಬ್ಬವೋ ಹಬ್ಬ.
Kshetra Samachara
02/07/2022 12:08 pm