ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಚಾಂಗದೇವನ ಗುರುವಾರದ ವಿಶೇಷ ಪೂಜೆಗೆ ಭಕ್ತಸಾಗರ

ನವಲಗುಂದ : ಸುಕ್ಷೇತ್ರವಾದ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿರುವ ಸುಪ್ರಸಿದ್ಧ ಚಾಂಗದೇವನ ಗುರುವಾರದ ವಿಶೇಷ ಪೂಜೆಗೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ, ಚಾಂಗದೇವನ ದರ್ಶನ ಪಡೆದು, ಬೆಣ್ಣೆ ಹಳ್ಳದಲ್ಲಿ ಮಿಂದೆದ್ದರು.

ಇದರ ನಿಮಿತ್ತವಾಗಿ ಯಮನೂರ ಗ್ರಾಮದಲ್ಲಿ ಜಾತ್ರೆಯ ಸಡಗರ ಮನೆ ಮಾಡಿತ್ತು. ಗ್ರಾಮದ ಪ್ರಮುಖ ರಸ್ತೆಯ ಬದಿಯಲ್ಲಿ ಅಂಗಡಿಗಳನ್ನು ಹಚ್ಚಿದಂತಹ ವ್ಯಾಪಾರಸ್ಥರು ಉತ್ತಮ ವ್ಯಾಪಾರದಿಂದ ಸಂತಸದಲ್ಲಿದ್ದಾರೆ. ವಾರದಲ್ಲಿ ಎರಡು ಬಾರಿ ಅಂದರೆ ಭಾನುವಾರ ಹಾಗೂ ಗುರುವಾರ ಸಂಭ್ರಮ, ಸಡಗರ ತುಂಬಿರುತ್ತೆ.

Edited By : PublicNext Desk
Kshetra Samachara

Kshetra Samachara

30/06/2022 09:01 pm

Cinque Terre

19.65 K

Cinque Terre

1

ಸಂಬಂಧಿತ ಸುದ್ದಿ