ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಭಕ್ತರ ಗಮನ ಸೆಳೆಯುತ್ತಿರುವ ಕಲಘಟಗಿಯ ದೊಡ್ಡ ಆಂಜನೇಯ ದೇವಸ್ಥಾನ

ಕಲಘಟಗಿ: ಕಲಘಟಗಿ ಪಟ್ಟಣದ ದ್ಯಾಮವ್ವನ ಗುಡಿ ಓಣಿಯಲ್ಲಿರುವ ದೊಡ್ಡ ಹನುಮಂತನ ದೇವಸ್ಥಾನ ಭಕ್ತರ ಗಮನ ಸೆಳೆಯುತ್ತಿದೆ. ಬಹಳ ವರ್ಷಗಳ ಹಳೆಯ ದೇವಸ್ಥಾನ ಇದಾಗಿದ್ದು ಕಳೆದ ಐದಾರು ತಿಂಗಳ ಹಿಂದೆ ಹಳೆಯ ದೇವಸ್ಥಾನ ತೆರವುಗೊಳಿಸಿ ನೂತನ ದೇವಸ್ಥಾನವನ್ನು ಕಟ್ಟಲಾಗಿದೆ. ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ದೇವಸ್ಥಾನದ ಒಳಗಿನ ಗೋಡೆಯ ಮೇಲೆ ಬಾಲ ಆಂಜನೇಯನ ಚಿತ್ರಗಳನ್ನು ಬಿಡಿಸಲಾಗಿದ್ದು ಭಕ್ತರ ಗಮನ ಸೆಳೆಯುವಂತಾಗಿದೆ.

ಪ್ರತಿ ಶನಿವಾರದಂದು ಕಲಘಟಗಿ ಪಟ್ಟಣದ ಜನರು ಈ ದೇವಸ್ಥಾನಕ್ಕೆ ಬಂದು ಆಂಜನೇಯನ ದರ್ಶನ ಪಡೆದುಕೊಳ್ಳುತ್ತಾರೆ. ಈ ದೇವಸ್ಥಾನದ ಸುತ್ತಮುತ್ತಲು ಪ್ರಶಾಂತವಾದ ವಾತಾವರಣವಿದ್ದು, ಭಕ್ತರು ಕಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಹಳೆಯ ದೇವಸ್ಥಾನವನ್ನು ನೂತನವಾಗಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ ದೇವಸ್ಥಾನದ ಟ್ರಸ್ಟ್ ಕಮಿಟಿಯವರಿಗೆ ಕಲಘಟಗಿ ಪಟ್ಟಣದ ಜನ, ಆಂಜನೇಯ ಭಕ್ತರು ಕೃತಜ್ಞತೆ ಸಲ್ಲಿಸಿದ್ದಾರೆ.

ವರದಿ: ಉದಯ ಗೌಡರ

Edited By :
Kshetra Samachara

Kshetra Samachara

25/06/2022 02:33 pm

Cinque Terre

29.3 K

Cinque Terre

1

ಸಂಬಂಧಿತ ಸುದ್ದಿ