ನವಲಗುಂದ : ಸುಮಾರು ನಾಲ್ಕು ತಿಂಗಳ ಹಿಂದೆ ನವಲಗುಂದ ಪಟ್ಟಣದ ಹೊರವಲಯದ ಶಲವಡಿ ರಸ್ತೆಯಲ್ಲಿನ ವಾಲ್ಮೀಕಿ ಭವನದ ಬಳಿಯ ಮಾಜಿ ಸಚಿವ ಕೆ.ಎನ್ ಗಡ್ಡಿ ಅವರು ಹದಿನೈದು ಗುಂಟೆ ಜಾಗವನ್ನು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕಾಗಿ ದಾನ ನೀಡಿದ್ದರು.
ಸ್ಥಳದ ವೀಕ್ಷಣೆಗೆ ಶುಕ್ರವಾರ ಹುಬ್ಬಳ್ಳಿಯ ಆನಂದ ಗುರುಸ್ವಾಮಿ ಅವರು ಆಗಮಿಸಿದ್ದರು.
ಈ ಸಂಧರ್ಭದಲ್ಲಿ ನವಲಗುಂದ ಅಯ್ಯಪ್ಪ ಸ್ವಾಮಿ ಕಮಿಟಿ ಅಧ್ಯಕ್ಷ ಮದನಮೋಹನ ಆನೆಗುಂದಿ, ನವಲಗುಂದ ಗುರುಸ್ವಾಮಿ ನಿಂಗಪ್ಪ ಮುಳ್ಳೂರು, ಗುರುಸ್ವಾಮಿ ಹುಚ್ಚಪ್ಪ ತಿರ್ದಾಳ, ಚನ್ನಪ್ಪ ಪವಾರ, ನೇತಾಜಿ ಕಲಾಲ್ ಸೇರಿದಂತೆ ಹಲವರು ಇದ್ದರು.
Kshetra Samachara
10/06/2022 08:03 pm