ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕುರುಬ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ನವಲಗುಂದ: ನವಲಗುಂದ ಪಟ್ಟಣದ ಕನಕ ಕಲ್ಯಾಣ ಮಂಟಪದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್.ಗಡ್ಡಿ ಅವರು, ಕುರುಬ ಸಮಾಜದ ಸಂಘಟನೆಯನ್ನು ಶಕ್ತಿಯುತವಾಗಿ ಬಲಪಡಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಉತ್ತಮ ಸಮಾಜ ಕಟ್ಟುವಲ್ಲಿ ಯಶಸ್ವಿಯತ್ತ ದಾಪುಗಾಲು ಹಾಕಬೇಕು. ಹಿಂದಿನದನ್ನೂ ಮರೆತು ಮುಂದಿನ ಸಮಾಜ ಒಳಿತನ್ನು ಕಾಪಾಡಲು ಮುಂದಾಗಬೇಕು ಎಂದರು.

ಕುರುಬ ಸಮಾಜ ಆರ್ಥಿಕ, ಶೈಕ್ಷಣಿಕ, ರಾಜಕೀಯ, ಆಡಳಿತ ಸೇರಿದಂತೆ ಪ್ರತಿಯೊಂದು ರಂಗಗಳಲ್ಲೂ ಬೆಳವಣಿಗೆ ಹೊಂದಲು ಸನ್ನದ್ಧರಾಗಬೇಕು. ಅದಕ್ಕೆ ಪೂರಕವಾಗಿ ಕುರುಬ ಸಮಾಜದ ಪ್ರತಿಯೊಬ್ಬರು ಜವಾಬ್ಧಾರಿ ಹೊತ್ತುಕೊಂಡು ಕುರುಬ ಸಮಾಜವನ್ನು ಬಲಿಷ್ಠಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎನ್.ಗಡ್ಡಿ ಹೇಳಿದರು.

ಅಣ್ಣಿಗೇರಿ ಪ್ರಮುಖರಾದ ಶಂಕರ ಕುರಿ, ಡಿ.ಎಲ್ ಅಡಕಾವು, ರಮೇಶ ಕರೆಟ್ಟಿನವರ, ಯಲ್ಲಪ್ಪ ಗೊರವರ, ಈರಪ್ಪ ಮಾಗಡಿ, ಸುಭಾಷ್ ಹಾಲವರ, ಬೀರೇಶ್ವರ ಬ್ಯಾಂಕ್ ಅಧ್ಯಕ್ಷ ಕುಮಾರ ಬ್ಯಾಹಟ್ಟಿ, ಮೊರಬ ಗ್ರಾ.ಪಂ. ಸದಸ್ಯ ಯೋಗಪ್ಪ ಗೋಲನಾಯ್ಕರ, ನಾಗರಾಜ ದಳವಾಯಿ, ಕನಕ ಕಲ್ಯಾಣ ಮಂಟಪದ ಅಧ್ಯಕ್ಷೆ ಪ್ರೇಮಾ ನಾಯ್ಕರ ಇದ್ದರು.

Edited By : PublicNext Desk
Kshetra Samachara

Kshetra Samachara

31/05/2022 08:11 pm

Cinque Terre

9.79 K

Cinque Terre

0

ಸಂಬಂಧಿತ ಸುದ್ದಿ