ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಬಿಸಾಬ ಅಜ್ಜನವರು ಹಾಗೂ ರಾಯೆಸಾಬ ಅಜ್ಜನವರ ಉರುಸ್ ನಿಮಿತ್ತ ಯರಗುಪ್ಪಿ ಗ್ರಾಮದ ಪ್ರಮುಖ ಬೀದಿ ಬೀದಿಗಳಲ್ಲಿ ಮೆರವಣಿಗೆ ಜರುಗಿತು.
ಸುಕ್ಷೇತ್ರ ಯರಗುಪ್ಪಿಯಲ್ಲಿ ನೆಲೆನಿಂತ ನಬಿಸಾಬ ರಾಯೆಸಾಬ ಅಜ್ಜನವರು ನಡೆಸಿದ ಪವಾಡಗಳು ಇಂದಿಗೂ ಯರಗುಪ್ಪಿ ಗ್ರಾಮದಲ್ಲಿ ಜನಜನಿತವಾಗಿದ್ದು, ಆ ಪವಾಡ ಪುರುಷ ಉರುಸುನ್ನು ಗ್ರಾಮಸ್ಥರು ಒಟ್ಟಾಗಿ ಗದ್ದುಗೆಗೆ ಹೂಗಳ ಅಲಂಕಾರ ಮಾಡಿ ಸಂಭ್ರಮದಿಂದ ಆಚರಿಸಿದರು.
ಹಲವಾರು ವರ್ಷಗಳ ಹಿಂದೆ ಮಳೆ ಬರದೆ ಇದ್ದಾಗ ಯರಗುಪ್ಪಿ ಬಸವೇಶ್ವರ ದೇವಸ್ಥಾನದಲ್ಲಿ ತಪಸ್ಸಿಗೆ ಕುಳಿತ ಅಜ್ಜನವರು ಮಳೆ ಬರಸಿದ ಮಹಾನ ದೈವ ಬಲದಿಂದ ಅಜ್ಜನ ಉರುಸಿಗೆ ನೂರಾರು ಭಕ್ತ ಸಮೂಹ ಹರಿದು ಬಂದು ಯಶಸ್ವಿಗೊಳಿಸಿದರು. ಉರುಸು ಮೆರವಣಿಗೆ ಮುಗಿದ ಮೇಲೆ ಸಕಲ ಗ್ರಾಮಸ್ಥರಿಗಾಗಿ ಅನ್ನ ಪ್ರಸಾದವನ್ನು ಏರ್ಪಡಿಸಲಾಗಿತ್ತು ಸರ್ವರು ಪ್ರಸಾದ ಸವಿದು ಪುನೀತರಾದರು.
Kshetra Samachara
30/05/2022 12:22 pm