ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಈ ವರ್ಷವಾದರೂ ಹೆಣ್ಣು ಸಿಗುವಂತೆ ಮಾಡಪ್ಪ ದೇವರೇ, ತೇರಿಗೆ ಬಾಳೆ ಹಣ್ಣು ಎಸೆದ ಯುವಕ

ನವಲಗುಂದ : ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಪಕ್ಕೀರೇಶ್ವರ ಜಾತ್ರಾ ಮಹೋತ್ಸವ ಬಹು ಸಡಗರದಿಂದ ಜರುಗುತ್ತಿದೆ. ಜಾತ್ರೆಯ ರಥೋತ್ಸವದ ವೇಳೆ ಯುವಕನೊಬ್ಬ 'ಈ ವರ್ಷವಾದರೂ ಹೆಣ್ಣು ಸಿಗುವಂತೆ ಮಾಡಪ್ಪ ದೇವರೇ' ಎಂದು ಬಾಳೆ ಹಣ್ಣಿನ ಮೇಲೆ ಬರೆದು ತೇರಿಗೆ ಎಸೆದಿದ್ದು ಈಗ ವೈರಲ್ ಆಗಿದೆ.

ಸಂಭ್ರಮದ ಪಕ್ಕೀರೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೇವಲ ಅಳಗವಾಡಿ ಗ್ರಾಮಸ್ಥರಷ್ಟೇ ಅಲ್ಲದೇ ಸುತ್ತ ಮುತ್ತಲಿನ ಗ್ರಾಮದ ಜನರು ಕಿಕ್ಕಿರಿದು ಸೇರಿದ್ದರು. ಜಾತ್ರೆಗೆ ಆಗಮಿಸಿದ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ತೇರಿಗೆ ಬಾಳೆ ಹಣ್ಣು ಎಸೆದು ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದರು.

Edited By : PublicNext Desk
Kshetra Samachara

Kshetra Samachara

18/05/2022 10:28 am

Cinque Terre

23.4 K

Cinque Terre

1

ಸಂಬಂಧಿತ ಸುದ್ದಿ