ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾಧಕರಿಗೆ ಸನ್ಮಾನ ಆಧ್ಯಾತ್ಮಿಕ ಆರ್ಶಿವಚನದ ಬಸವ ಜಾತ್ರೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ರಥವನ್ನು ಹರಗುರು ಶಿವ ಎಂಬ ಮಂತ್ರದೊಂದಿಗೆ ಸಕಲ ವಾದ್ಯ ಮೇಳದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.

ಜಾತ್ರಾ ನಿಮಿತ್ತ ಬೆಳಿಗಿನಿಂದಲೇ ಬಸವೇಶ್ವರನಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಹೂವಿನ ಅಲಂಕಾರವು ನೆರವೇರಿಸಲಾಯಿತು.

ಸಂಜೆ ಮಹಾರಥೋತ್ಸವಕ್ಕೆ ಕುಂದಗೋಳ ದಾಸೋಹಿ ಮಠದ ಪರಮಪೂಜ್ಯ ಕಲ್ಯಾಣಪುರಮಠದ ಬಸವಣ್ಣ ಅಜ್ಜನವರು ಹಾಗೂ ಬಂಕಾಪುರದ ಶ್ರೀ ಸಿದ್ದಯ್ಯ ಮಹಾಸ್ವಾಮಿಗಳು ವೀರೇಶ್ವರ ಶಾಸ್ತ್ರಿಗಳು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಸಾಯಂಕಾಲ ಡಾ.ಎ.ಸಿ.ವಾಲಿ ಗುರೂಜಿಗಳಿಂದ ಆರ್ಶಿವಚನ ಕಾರ್ಯಕ್ರಮ ಹಾಗೂ ಮಾಜಿ ಶಾಸಕ ಕೃಷಿ ಉತ್ಪನ್ನ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ ಜಾತ್ರೆ ಉದ್ದೇಶಿಸಿ ಮಾತನಾಡಿದರು ಬಳಿಕ ಗ್ರಾಮದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Edited By :
Kshetra Samachara

Kshetra Samachara

16/05/2022 12:10 pm

Cinque Terre

15.24 K

Cinque Terre

0

ಸಂಬಂಧಿತ ಸುದ್ದಿ