ನವಲಗುಂದ : ನವಲಗುಂದ ತಾಲ್ಲೂಕಿನ ಅಮರಗೊಳ ಗ್ರಾಮದಲ್ಲಿ ಗ್ರಾಮ ದೇವತೆಯರಾದ ಶ್ರೀ ದ್ಯಾಮವ್ವ-ದುರ್ಗಮ್ಮ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಭಜನೆ, ಡೊಳ್ಳು, ಮಹಿಳೆಯರಿಂದ ಪೂರ್ಣಕುಂಭ ಶೋಭಾಯಾತ್ರೆಯೊಂದಿಗೆ ಭಂಡಾರ ವೈಭವ ಜೋರಾಗಿತ್ತು.
ಇನ್ನು ಭಂಡಾರ ಸಂಭ್ರಮದಲ್ಲಿ ಮಹಿಳೆಯರಿಂದ ಪೂರ್ಣಕುಂಭ ಶೋಭಾಯಾತ್ರೆಯಲ್ಲಿ ಗಜರಾಜನ ಎಂಟ್ರಿ ಸಹ ಆಗಿತ್ತು. 5ನೇ ತಾರೀಕಿನಿಂದ ಆರಂಭವಾಗಿರುವ ಜಾತ್ರೆ ಪ್ರತಿದಿನ ದೇವಿಯರ ಹೊನ್ನಾಟ ಕಾರ್ಯಕ್ರಮ ಜರುಗಲಿದೆ. ಇನ್ನು 10 ದಿನಗಳ ಕಾಲ ನಡೆಯುತ್ತಿರುವ ಜಾತ್ರೆಗೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದಾರೆ.
Kshetra Samachara
13/05/2022 07:42 pm