ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 400 ವರ್ಷಗಳ ಇತಿಹಾಸ : ಭಕ್ತರ ಇಷ್ಟಾರ್ಥ ಪೂರೈಸಲು ಧರೆಗಿಳಿದ ದಾರಾವತಿ ಆಂಜನೇಯ

ಹುಬ್ಬಳ್ಳಿ: ನಂಬಿದ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಕರುಣಾಮಯಿ. ಸುಮಾರು 400 ವರ್ಷಗಳ ಇತಿಹಾಸವಿರುವ ದಾರಾವತಿ ಆಂಜನೆಯನ ಈ ದೇವಸ್ಥಾನ ಭಕ್ತರ ಆರಾಧ್ಯ ದೈವ. ತಮ್ಮ ಇಷ್ಟಾರ್ಥ ಪೂರೈಕೆಗಾಗಿ ಸುತ್ತಲಿನ ಗ್ರಾಮದ ಭಕ್ತರು ಮಾತ್ರವಲ್ಲ ಜಿಲ್ಲೆಯ ಮೂಲೆ ಮೂಲೆಗಳಿಂದ ಹರಿದು ಬರುತ್ತದೆ ಜನಸಾಗರ.

ಹೌದು... ಸುಪ್ರಸಿದ್ಧ ಗೋಕುಲ ಗ್ರಾಮದ ದಾರಾವತಿ ವೀರಾಂಜನೆಯ ತಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ಅಪಾರ ನಂಬಿಕೆ. ಆ ನಂಬಿಕೆ ಎಂದೂ ಸುಳ್ಳಾಗುವುದಿಲ್ಲ ಎಂಬುದು ಭಕ್ತಾದಿಗಳ ಅನಿಸಿಕೆ.

ಮೊದಲು ಈ ಸ್ಥಳ ದಟ್ಟ ಕಾಡಾಗಿತ್ತು. ಆಂಜನೇಯ ದೇವಸ್ಥಾನ ತಲುಪಲು ಭಕ್ತರು ಹರಸಾಹಸ ಪಡಬೇಕಾಗಿತ್ತು. ಆದರೆ ಜನರ ಶ್ರದ್ಧಾಭಕ್ತಿ ಅಪಾರವಾಗಿತ್ತು. ಎಷ್ಟೇ ಕಷ್ಟವಾದರೂ ಚಿಂತೆ ಇಲ್ಲ ಆತನ ದರುಶನ ಪಡೆಯಲೇಬೇಕೆಂಬ ಸಂಕಲ್ಪ ಹೊತ್ತ ಭಕ್ತರು ನಿರಂತವಾಗಿ ಆಗಮಿಸುತ್ತಿದ್ದರು. ಇಂದಿನವರೆಗೂ ಅದೇ ಪರಿಪಾಠ ಮುಂದುವರಿದಿದೆ.

ಅಂದು ಮಣ್ಣಿನಿಂದ ನಿರ್ಮಿತವಾಗಿದ್ದ ದೇವಸ್ಥಾನ ಈಗ ಭಕ್ತರ ಎಲ್ಲ ರೀತಿಯ ಸೇವೆ ಪ್ರತೀಕವಾಗಿ ಜೀರ್ಣೋದ್ಧಾರಗೊಂಡು ಸುಂದರ ತಾಣದಲ್ಲಿ ಭವ್ಯ ದೇವಸ್ಥಾನ ಎದ್ದು ನಿಂತಿದೆ. ನಿತ್ಯ ಭಕ್ತಭಾವಗಳೊಂದಿಗೆ ಜನ ದರುಶನಕ್ಕೆ ಆಗಮಿಸುತ್ತಾರೆ.

ಈ ಸ್ಥಳದಲ್ಲಿ ದಾರಾವತಿ ಎಂದು ಗ್ರಾಮ ಇತ್ತಂತೆ. ಪ್ಲೇಗ್, ಕಾಲರಾದಂತಹ ಭಯಾನಕ ಮಾರಿಗೆ ಭಯಪಟ್ಟು ಜನ ಗ್ರಾಮ ತೊರೆಯಬೇಕಾದ ಪರಿಸ್ಥಿತಿ ಬಂತು. ಆಗ ಊರ ಹೊರಗೆ ಪುಟ್ಟ ಗುಡಿಯಲ್ಲಿದ್ದ ಆಂಜನೇಯನ ಮೊರೆ ಹೋದರು. ಈ ಮಹಾ ಮಾರಿಯಿಂದ ನಮಗೆ ಮುಕ್ತಿ ಕೊಡಿಸು, ನಾವು ನಿನ್ನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಬೇಡಿಕೊಂಡರಂತೆ.

ಅದಕ್ಕೆ ಈ ಆಂಜನೇಯ ತಥಾಸ್ತು ಎಂದಿದ್ದರಿಂದ ಅಲ್ಲಿಯ ಜನ ರೋಗರುಜಿನಗಳಿಂದ ಮುಕ್ತಿ ಹೊಂದಿ ಅಲ್ಲಿಯೇ ನೆಲೆಸಿದರಂತೆ. ಇದೆಲ್ಲವೂ ಆಂಜನೆಯನ ಪವಾಡ, ಆತನನ್ನು ನಂಬಿದೆ ಎಲ್ಲ ಇಷ್ಟಾರ್ಥಗಳು ಪೂರೈಸುತ್ತವೆ ಎಂಬ ಅಂದಿನ ನಂಬಿಕೆ, ಇಂದಿಗೂ ಜನಜನೀತವಾಗಿವೆ.

ಈಗ ಸಾವಿರಾರು ಭಕ್ತರು ಗೋಕುಲ್ ದಾರಾವತಿ ವೀರಾಂಜನೇಯ ಹನುಮಪ್ಪನ ದರ್ಶನಕ್ಕೆ ಬರುತ್ತಿದ್ದಾರೆ.. ಇಲ್ಲಿ ಪ್ರತಿ ಶನಿವಾರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಇದೇ ಮೇ 13 ರಿಂದ 17ರ ವರೆಗೆ ಸುಕ್ಷೇತ್ರ ದಾರಾವತಿ ಶ್ರೀ ಹನುಮಂತ ದೇವಸ್ಥಾನದ ಕಳಸಾರೋಹಣ, ಶ್ರೀ ಬಸವಣ್ಣ ಮಂಟಪ ಲೋಕಾರ್ಪಣೆ ಹಾಗೂ ನಂದಿ ಮೂರ್ತಿ ಪ್ರತಿಷ್ಠಾಪನೆ

ನೆರವೇರಲಿದೆ.

ಕಾರ್ಯಕ್ರಮ ವಿವರ : ಮೇ 13 ಶುಕ್ರವಾರದಂದು ಗೋಕುಲ್ ಶ್ರೀ ವೀರಾಂಜನೇಯ ಸ್ವಾಮೀಯ ದೇವಸ್ಥಾನದಿಂದ ಕಳಸ ಪಲ್ಲಕ್ಕಿ ಮತ್ತು ಉಣಕಲ್ ಗ್ರಾಮದ ಶ್ರೀ ಹನುಮಂತ ದೇವರ ಪಲ್ಲಕ್ಕಿ ಜಂಬೂ ಸವಾರಿ, ಅಶ್ವಮೇಧ ಉತ್ಸವವು ಕುಂಭ ವಾದ್ಯಮೇಳಗಳೊಂದಿಗೆ ಗೋಕುಲ ಗ್ರಾಮದಿಂದ ದಾರಾವತಿ ಹನುಮಾನ ದೇವಸ್ಥಾನ ಬರುತ್ತಾರೆ. ಇದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಚಾಲನೆ ನೀಡುತ್ತಾರೆ.

ಮೇ 14 ಶನಿವಾರದಂದು ಕಳಸಾರೋಹನ, ಏಕದಶ, ರುದ್ರಾಭಿಷಕ, ಪಂಚಾಮೃತ ಅಭಿಷೇಕ, ಹಾಗೂ ಮಹಾ ಮಂಗಳಾರುತಿ ಇರುತ್ತದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ. ಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು ಮೂರು ಸಾವಿರಮಠ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಮುಖ್ಯ ಅತಿಥಿಗಳಾಗಿ ಹಲವರು ಮಠದ ಸ್ವಾಮೀಜಿಗಳು ಭಾಗವಹಿಸುತ್ತಾರೆ. ಅದೇ ದಿನ ಸಾಯಂಕಾಲ 5 ಕ್ಕೆ ದೇವಸ್ಥಾನದ ಮುಂದೆ ಓಕಳಿ ಆಟ, ರಾತ್ರಿ 8 ಗಂಟೆಗೆ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಲಿದೆ.

ಹುಬ್ಬಳ್ಳಿ: ಮೇವ 15 ರವಿವಾರ ದಂದು ಸಾಯಂಕಾಲ 6ಕ್ಕೆ ಖಾಸಗಿ ಕನ್ನಡ ವಾಹಿನಿ ಖ್ಯಾತಿಯ ಹನಮಂತ ಲಮಾಣಿ ಹಾಗೂ ರಾಕ್ ಸ್ಟಾರ್ ಇವೆಂಟ್ಸ್ ಇವರಿಂದ ಸಂಗೀತ ಕಾರ್ಯಕ್ರಮಗಳು.

ಮೇ 16 ಸೋಮವಾರದಂದು ಹಳ್ಳಿ ಹುಡುಗಿ ಮೊಸರ ಗಡಗಿ ನಾಟಕ ಪ್ರದರ್ಶನ,

ಮೇ 17 ಮಂಗಳವಾರದಂದು ಜಗ್ಗಿ ಕಾಟಾ ನಿಕಾಲಿ ಕುಸ್ತಿಗಳ ಕಾರ್ಯಕ್ರಮ. ರವಿ ಡಿ ಚನ್ನಣ್ಣವರ ಉದ್ಘಾಟನೆ ಮಾಡುವವರು. ಸಾಯಂಕಾಲ ಜಾನಪದ ವೈವಿಧ್ಯಮಯ ಕಾರ್ಯಕ್ರಮಗಳು ಜರಗುತ್ತವೆ.

ಎಲ್ಲ ಸದಭಕ್ತರು ಬಂದು ಮೇ 13 ರಿಂದ 17 ರವರೆಗೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಹನುಮಂತನ ಆಶಿರ್ವಾದ ಪಡೆಯಬೇಕೆಂದು ಆಡಳಿತ ಮಂಡಳಿ ಕೋರಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/05/2022 10:13 am

Cinque Terre

65.3 K

Cinque Terre

24

ಸಂಬಂಧಿತ ಸುದ್ದಿ