ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮೈಲಾರಲಿಂಗೇಶ್ವರ ಶಿಬಾರಗಟ್ಟಿ ಪ್ರಾಣ ಪ್ರತಿಷ್ಠಾಪನೆ

ನವಲಗುಂದ: ಬಸವೇಶ್ವರ ನಗರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಬಾರಗಟ್ಟಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಭಾನುವಾರವಾದ ಇಂದು ಹೋಮದ ಪೂಜೆ ಮಾಡಿ ಮೈಲಾರಿಗೇಶ್ವರ ಮೂರ್ತಿಯನ್ನು ಸಿಬರಗಟ್ಟಿಯಲ್ಲಿ ಹಿರೇಮಠದ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳು ಹಾಗೂ ದೇವರಾಗುಡ್ಡದ ನಾಗಪಜ್ಜರ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಹೌದು. ಬುಧವಾರ ಮೈಲಾರಲಿಂಗೇಶ್ವರ ದೇವರ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಪಂಜಿನ ಹಾಗೂ ಕುಂಭಮೇಳದ ಮುಖಾಂತರ ಮೆರವಣಿಗೆ ಮಾಡುತ್ತ ಬಹಳ ವಿಜೃಂಭಣೆಯಿಂದ ಮೂರ್ತಿಯನ್ನು ತರಲಾಯಿತು. ಗುರುವಾರ ಮೈಲಾರಲಿಂಗೇಶ್ವರ ದೇವರ ಮೂರ್ತಿಯನ್ನು ಜಲದಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು. ಶುಕ್ರವಾರ ಮೂರ್ತಿಯನ್ನು ಗೋಧಿ ಕಾಳುಗಳಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು. ನಂತರ ಶನಿವಾರದಂದು 9 ತರಹದ ಪುಷ್ಪಗಳಲಿ ಇಟ್ಟು ಪೂಜೆ ಸಲ್ಲಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

08/05/2022 05:40 pm

Cinque Terre

26.63 K

Cinque Terre

0

ಸಂಬಂಧಿತ ಸುದ್ದಿ