ನವಲಗುಂದ : ನವಲಗುಂದ ತಾಲ್ಲೂಕಿನ ಖನ್ನೂರ ಗ್ರಾಮದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ಜಾತ್ರೆಯ ಸಡಗರ ಮನೆ ಮಾಡಿತ್ತು. ಭಕ್ತರು ಸಾಗರೋಪಾದಿಯಲ್ಲಿ ಗ್ರಾಮದ ಮೋಟ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದರು.
ತಾಲ್ಲೂಕಿನ ಗ್ರಾಮದ ಖನ್ನೂರ್ ಮೋಟ ಬಸವೇಶ್ವರ ಜಾತ್ರೆಗೆ ಮಂಗಳವಾರ ಭಕ್ತರ ದಂಡು ಬಂದಿತ್ತು. ಮೋಟ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆದಿದ್ದವು. ಮಹಿಳೆಯರು, ಮಕ್ಕಳು, ಯುವಕರು ಜಾತ್ರೆಗೆ ಬಂದು ಬಸವೇಶ್ವರನ ದರ್ಶನ ಪಡೆದರು.
Kshetra Samachara
03/05/2022 11:10 pm