ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗವಿಮಠ ಶ್ರೀಗಳ ನೇತೃತ್ವದಲ್ಲಿ ಬಸವ ಜಯಂತಿ ಮತ್ತು ರಂಜಾನ್, ಕೋನರಡ್ಡಿ ಭಾಗಿ

ನವಲಗುಂದ : ಮಾಜಿ ಶಾಸಕ ಎನ್. ಹೆಚ್ ಕೋನರಡ್ಡಿ ಅವರ ನೇತೃತ್ವದಲ್ಲಿ ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನು

ನವಲಗುಂದದಲ್ಲಿ ಹಿಂದೂ-ಮುಸ್ಲಿಂ ಸಮಾಜದ ಎಲ್ಲರೂ ಒಟ್ಟುಗೂಡಿ ಭಾವೈಕ್ಯತೆಯ ಕೇಂದ್ರ ನವಲಗುಂದದಲ್ಲಿ ಹಬ್ಬವನ್ನು ಆಚರಿಸಲಾಯಿತು.

ನವಲಗುಂದ ಪಟ್ಟಣದ ಗವಿಮಠದಲ್ಲಿ ಶ್ರೀ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವ ಜಯಂತಿಯ ಹಿನ್ನೆಲೆ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಇನ್ನು ನವಲಗುಂದದ ಅಂಜುಮನ್ ಸಂಸ್ಥೆಯ

ಈದ್ಗಾ ಮೈದಾನದಲ್ಲಿ ಹಿಂದೂ-ಮುಸ್ಲಿಂ ಸಮಾಜದೊಂದಿಗೆ

ನಮಾಜ್ ಮಾಡಲಾಯಿತು.

ಇನ್ನು ನಂತರ ಮಾತನಾಡಿದ ಕೋನರಡ್ಡಿ, ಪವಿತ್ರ ರಂಜಾನ್ ಹಬ್ಬ ಹಾಗೂ ಬಸವ ಜಯಂತಿಯ ಶುಭಾಷಯಗಳನ್ನು ತಿಳಿಸಿ, ಸರ್ವಧರ್ಮದ ಎಲ್ಲ ಮುಖಂಡರುಗಳು ಭಾಗವಹಿಸಿ, ಅವರವರ ಹಬ್ಬಗಳು ಅವರವರ ಧರ್ಮದ ಆಚರಣೆ ಪ್ರಕಾರ ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನ ತತ್ವಗಳು ನಮಗೆ ಮಾದರಿಯಾಗಿವೆ ಎಂದರು.

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಖಾಜಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ಬಾಸ ದೇವರಿಡು, ಉಪಾಧ್ಯಕ್ಷ ದಾವಲಸಾಬ ಮಸೂತಿ, ಎ.ಎಮ್. ನದಾಫ, ಮೋದಿನಸಾಬ ಶಿರೂರ, ರೆಹಮಾನಸಾಬ ಧಾರವಾಡ, ಬಾಬಾಜಾನ ಮಕಾನದಾರ, ಐ.ಡಿ. ಭಾಗವಾನ, ರಿಯಾಜಅಹ್ಮದ ಪಿರಜಾದೆ, ಅಣ್ಣಪ್ಪ ಭಾಗಿ, ಸಿದ್ದಲಿಂಗಯ್ಯ ಹಿರೇಮಠ, ಬಾಬಾಜಾನ ಮುಲ್ಲಾ, ಸೈಫುದ್ದೀನ ಅವರಾದಿ, ಬಾಬಾಜಾನ ಧಾರವಾಡ, ಉಸ್ಮಾನ ಬಬರ್ಚಿ, ಆರ್.ಎಮ್. ರಮಜಾನಿ ವಕೀಲರು, ಎಮ್.ಎಮ್. ಗದಗ, ಸಿದ್ದು ಪೂಜಾರ, ಖಲಂದರ ಜಿಗಳೂರ, ಮಲಂಗ ನದಾಫ, ಶಾಸ್ತ್ರಿ, ರಿಯಾಜ ನಾಶಿಪುಡಿ, ಅಲ್ಲಾಸಾಬ ಕಲಕುಟ್ರಿ, ಸುಲೇಮಾನ ನಾಶಿಪುಡಿ, ಅಶ್ಪಾಕ ಚಾಹುಸೇನ, ಸಿರಾಜುದ್ದೀನ ಧಾರವಾಡ, ದಾದಾಪೀರ ಜಮಖಾನ, ತೌಸಿಫ ಜಮಖಾನ ಮುಂತಾದವರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

03/05/2022 09:42 pm

Cinque Terre

2.54 K

Cinque Terre

1

ಸಂಬಂಧಿತ ಸುದ್ದಿ