ನವಲಗುಂದ : ನವಲಗುಂದ ಶ್ರೀ ಗವಿಮಠದಲ್ಲಿ ಜಗದ್ಗುರು ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ ಇದೇ ತಿಂಗಳ ಒಂದರಿಂದ ಐದನೇ ತಾರೀಖಿನವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನವಲಗುಂದ ಪಟ್ಟಣದಲ್ಲಿ ಪ್ರಕಟನೆ ಹೊರಡಿಸಲಾಗುತ್ತಿದೆ.
ಇನ್ನೂ ಕಾರ್ಯಕ್ರಮವನ್ನು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ. ಇಂದು ಬಸವ ಜಯಂತಿಯಂದು ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಪ್ರಕಟಣೆಯನ್ನು ನವಲಗುಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತ ಮಾಹಿತಿಯನ್ನು ನೀಡಲಾಯಿತು.
Kshetra Samachara
03/05/2022 09:46 am