ಕಲಘಟಗಿ : ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ರುಸ್ತುಮ್ ಶಾಹಿದ್ ದರ್ಗಾ ವಿದ್ಯುತ್ ದೀಪಗಳ ಅಲಂಕಾರಗಳಿಂದ ಕಂಗೊಳಿಸುತ್ತಿದೆ.
ಹೌದು, ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ತಾಲೂಕಿನ ಜನತೆ ತತ್ತರಿಸಿ ಹೋಗಿದ್ದು, ಎರಡು ವರ್ಷಗಳಿಂದ ಯಾವುದೇ ಹಬ್ಬಗಳನ್ನು ಆಚರಿಸದೆ ತಾಲೂಕಿನಲ್ಲಿ ಸಂಭ್ರಮದ ವಾತಾವರಣವೇ ಮಾಯವಾದಂತಾಗಿತ್ತು.
ಆದ್ದರಿಂದ ಈ ವರ್ಷದ ರಂಜಾನ್ ಹಾಗೂ ಬಸವ ಜಯಂತಿ ಹಬ್ಬವು ಏಕಕಾಲಕ್ಕೆ ಬಂದಿರುವುದರಿಂದ ಸಾರ್ವಜನಿಕರು ಹಾಗೂ ಮುಸ್ಲಿಂ ಬಾಂಧವರು ಹಬ್ಬದ ಉತ್ಸುಕತೆಯಲ್ಲಿ ತಲ್ಲೀನರಾಗಿದ್ದಾರೆ. ಆದ್ದರಿಂದ ಪಟ್ಟಣದಲ್ಲಿನ ರುಸ್ತುಮ್ ಶಾಹಿದ್ ದರ್ಗಾವನ್ನು ಮುಸ್ಲಿಂ ಸಮುದಾಯದವರು ವಿದ್ಯುತ್ ದೀಪಗಳಿಂದ ಅಲಂಕರಿಸಿ ರಂಜಾನ್ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ತಾಲೂಕಿನ ಜನರು ಬಸವ ಜಯಂತಿ ಪ್ರಯುಕ್ತ ಹೂವಿನ ಮಾಲೆ, ದ್ರಾಕ್ಷಿ ವಿವಿಧ ಹಣ್ಣುಗಳ ಅಂಗಡಿಗಳಲ್ಲಿ ಸಾಲುಗಟ್ಟಿ ವಹಿವಾಟು ನಡೆಸಲು ಮುಂದಾಗಿದ್ದಾರೆ.
ವರದಿ -ವಿರೇಶ ಹಾರೊಗೇರಿ
Kshetra Samachara
02/05/2022 06:09 pm