ನವಲಗುಂದ : ನವಲಗುಂದ ತಾಲೂಕಿನ ಕುಮಾರಗೊಪ್ಪ ಗ್ರಾಮದಲ್ಲಿ ಶ್ರೀ ಸಂಸ್ಥಾನ ಪಂಚಗೃಹ ಹಿರೇಮಠ ನವಲಗುಂದದ ಖಾಸಾ ಶಾಖಾ ಮಠದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಾತಃ ಕಾಲದಲ್ಲಿ ಕರ್ತೃ ಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ ವೇದಮೂರ್ತಿ ಫಕ್ಕೀರಯ್ಯ ಹಿರೇಮಠ ಸಕಲ ವೈದಿಕ ವಿಧಾನವನ್ನು ನೆರವೇರಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧೇಶ್ವರ ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವವು ಪೂರ್ಣಕುಂಭ, ಆರತಿ, ಸಕಲ ವಾದ್ಯ ಮೇಳದೊಂದಿಗೆ ನಡೆಯಿತು. ನಂತರ ಧರ್ಮ ಸಭೆ ನಡೆಯಿತು ಶ್ರೀ ಮಠದ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಎಲ್ಲ ಕಾರ್ಯಕ್ರಮಗಳೂ ನರವೇರಿದವು.
ಈ ಸಂದರ್ಭದಲ್ಲಿ ಮಾತನಾಡಿ ಬ್ಯಾಹಟ್ಟಿ ಹಿರೇಮಠದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ನವನಗರದ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಧರ್ಮೋಪದೇಶ ನೀಡಿದರು.
Kshetra Samachara
29/04/2022 12:43 pm