ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಉಚಿತ ಸಾಮೂಹಿಕ ಉಪನಯನ

ನವಲಗುಂದ : ಶ್ರೀ ಅಜಾತ ನಾಗಲಿಂಗಸ್ವಾಮಿ ಮಠದ ವತಿಯಿಂದ ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ನವಲಗುಂದ ಪಟ್ಟಣದ ನಾಗಲಿಂಗಸ್ವಾಮಿ ಮಠದಲ್ಲಿ ಜರುಗಿತು.

ವಿಶ್ವಕರ್ಮ ಸಮಾಜದ 40 ವಟುಗಳಿಗೆ ಸಾಮೂಹಿಕವಾಗಿ ಬ್ರಹ್ಮೋಪದೇಶ ನೀಡಲಾಯಿತು. ಧಾರ್ಮಿಕ ವಿಧಿ ವಿಧಾನವನ್ನ ಮಠದ ವೀರೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ವಟುಗಳಿಗೆ ಸಂಧ್ಯಾವಂದನೆಯನ್ನ ಸಿದ್ದಯ್ಯಸ್ವಾಮೀಜಿ ಬೋದಿಸಿದರು.

ಶ್ರೀಮಠದ ಪೂಜ್ಯರಾದ ವೀರೇಂದ್ರ ಸ್ವಾಮೀಜಿಗಳು ಮಾತನಾಡಿ, ಶ್ರೀಮಠದ ಹಿಂದಿನ ಶ್ರೀಗಳಾದ ಅಭಿನವ ನಾಗಲಿಂಗ ಸ್ವಾಮಿಗಳ ಸಂಕಲ್ಪದಂತೆ ಸುಮಾರು 15 ವರ್ಷಗಳಿಂದ ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ವಟುಗಳು ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಅನುಷ್ಠಾನ ಮಾಡಬೇಕು. ಅದರ ಫಲದಿಂದ ಉತ್ತಮ ನಾಗರಿಕರಾಗಿ ದೇಶಕ್ಕೆ ಮಾದರಿಯಾಗಬೇಕು. ಹಾಗೇ ಶ್ರೀ ಮಠದ ವತಿಯಿಂದ ನಡೆಸಲ್ಪಡುವ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಿಂದ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಶ್ರೀ ಮಠವು ಉಚಿತ ವಸತಿ ಮತ್ತು ಊಟದ ಯೋಜನೆ ರೂಪಿಸಲಾಗಿದ್ದು, ಸಮಾಜದ ಬಂಧುಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎನ್. ಎಚ್. ಕೋನರಡ್ಡಿ, ತಹಶೀಲ್ದಾರ್ ಅನೀಲ ಬಡಿಗೇರ, ಆನಂದ ಹವಳಕೋಡ, ಧರ್ಮೆಂದ್ರಸ್ವಾಮೀಜಿ, ನಾಗಲಿಂಗ ಬಡಿಗೇರ, ನರಸಪ್ಪ ಬಡಿಗೇರ, ಶಿವರಾಮಸ್ವಾಮೀಜಿ, ವಟುಗಳು ಹಾಗೂ ತಂದೆ ತಾಯಿಗಳು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/04/2022 01:02 pm

Cinque Terre

6.88 K

Cinque Terre

0

ಸಂಬಂಧಿತ ಸುದ್ದಿ