ಕುಂದಗೋಳ : ಸಂಪೂರ್ಣ ಕುಂದಗೋಳದಲ್ಲೇ ಬೃಹತ್ ರಥ ಹೊಂದಿದ ಯರೇಬೂದಿಹಾಳ ಗ್ರಾಮದ ನಂದೀಶ್ವರ ಜಾತ್ರಾ ಮಹೋತ್ಸವ ಪುರವಂತರ ಶಸ್ತ್ರ ಪವಾಡ, ಗುಗ್ಗಳ ಆಟದ ನಡುವೆ ಅತಿ ಸಂಭ್ರಮದಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ನಂದೀಶ್ವರನ ಜಾತ್ರೆ ನಿಮಿತ್ತ ನಂದೀಶ್ವರನ ಗದ್ದುಗೆಗೆ ಬೆಳಿಗ್ಗೆ ಪೂಜಾಭಿಷೇಕ ಸಲ್ಲಿಸಲಾಯಿತು. ಬಳಿಕ ಪುರವಂತರಿಂದ ಗುಗ್ಗಳ ಅಗ್ನಿ ಕಾರ್ಯಕ್ರಮ ನಡೆಯಿತು.
ಜಾತ್ರಾ ನಿಮಿತ್ತ ನಂದಿಕೋಲು ಹಾಗೂ ನಂದೀಶ್ವರನ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಸಂಚರಿಸಿ ಭಕ್ತಿ ಸಂಚಲನ ಮೂಡಿಸಿತು.
ಸಂಜೆ ನೆರವೇರಿದ ರಥೋತ್ಸವದಲ್ಲಿ ಯರೇಬೂದಿಹಾಳ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಯ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸವಿದು ಪುನೀತರಾದರು.
Kshetra Samachara
22/04/2022 10:59 pm