ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಎಲ್ಲೆಡೆ ವರ್ಷದ ಮೊದಲ ಅಂಗಾರಕ ಸಂಕಷ್ಟಿಯನ್ನು ಇಂದು ಶ್ರದ್ಧಾ-ಭಕ್ತಿಯಿಂದ ಜನರು ಆಚರಿಸಿದರು.
ವಾಣಿಜ್ಯ ನಗರಿಯಲ್ಲಿ ನಡೆಯುತ್ತಿರುವ ಕೋಮು ಗಲಭೆ ಜನರನ್ನು ಭಯಭೀತರನ್ನಾಗಿಸುತ್ತಿದೆ. ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಒಂದಾಗಿ ಬಾಳಬೇಕೆಂದು ನಗರದ ಗಣೇಶಪೇಟೆಯ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಮಾಡಿದರು.
ಬೆಳಗ್ಗೆಯಿಂದ ನಗರದ ಜನರು ಕುಟುಂಬ ಸಮೇತರಾಗಿ ಗಣಪತಿಯ ದೇವಸ್ಥಾನಕ್ಕೆ ಆಗಮಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಗಣಪತಿ ಎಲ್ಲಾ ಗಣಗಳಿಗೂ ಅಧಿಪತಿ. ಹೀಗಾಗಿ ಎಲ್ಲಾ ಪೂಜೆ ಪುನಸ್ಕಾರ ಸಂದರ್ಭವೂ ಪ್ರಥಮ ಪೂಜಿತ ವಿಘ್ನ ವಿನಾಶಕನ ಪೂಜೆ ನಡೆಸಿ ಆತನ ಕೃಪೆಗೆ ಪಾತ್ರರಾಗುತ್ತಾರೆ.
ಒಟ್ಟಿನಲ್ಲಿ ಹಿಂದೂ ಧರ್ಮದ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಅಂಗಾರಕ ಸಂಕಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಬಹುತೇಕ ದೇವಸ್ಥಾನಗಳು ಭಕ್ತರಿಂದ ತುಂಬಿದ್ದವು. ಸಹಸ್ರಾರು ಭಕ್ತರು ವಿಶೇಷ ದಿನದಂದು ದೇವರ ದರ್ಶನ ಪಡೆದು ಪುನೀತರಾದರು.
Kshetra Samachara
19/04/2022 02:09 pm