ಧಾರವಾಡ: ರಂಜಾನ್ ಹಬ್ಬ ಬಂತೆಂದರೆ ಸಾಕು ಮುಸ್ಲಿಂ ಬಾಂಧವರು ಉಪವಾಸ ವೃತ ಮಾಡುತ್ತಾರೆ. ಸಂಜೆ ಊಟ ಮಾಡಿ ಉಪವಾಸ ವೃತ ಪೂರ್ಣಗೊಳಿಸುತ್ತಾರೆ. ಈ ಹಬ್ಬದಂದು ಅಲ್ಲಲ್ಲಿ ಇಫ್ತಾರ್ ಕೂಟಗಳನ್ನು ಮಾಡಿ ಮುಸ್ಲಿಂ ಹಾಗೂ ಹಿಂದೂ ಬಾಂಧವರು ಸೌಹಾರ್ದತೆ ಮೆರೆಯುತ್ತಾರೆ.
ಸೋಮವಾರ ಕೂಡ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಇಸ್ಮಾಯಿಲ್ ತಮಟಗಾರ ಅಭಿಮಾನಿ ಬಳಗದ ವತಿಯಿಂದ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕೂಟದಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಪಾಲ್ಗೊಂಡು ಸೌಹಾರ್ದದ ಔತಣಕೂಟ ನಡೆಸಿದರು.
ಇನ್ನು ಧಾರವಾಡ ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮದೇ ಆದ ತಂಡ ರಚನೆ ಮಾಡಿರುವ ಇಸ್ಮಾಯಿಲ್ ತಮಟಗಾರ ಕೂಡ ಸ್ವತಃ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಗಮನಸೆಳೆದರು.
Kshetra Samachara
19/04/2022 09:16 am