ಧಾರವಾಡ: ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಶನಿವಾರ ಭರ್ಜರಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ರಂಜಾನ್ ಹಬ್ಬದ ಅಂಗವಾಗಿ ಸಹಜವಾಗಿಯೇ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಹಿಂದೂ, ಮುಸ್ಲಿಂ ಎಂಬ ಬೇಧ ಹುಟ್ಟಿಕೊಂಡಿದ್ದು, ಇದನ್ನು ಹೋಗಲಾಡಿಸಿ ನಾವೆಲ್ಲ ಒಂದೇ, ನಾವೆಲ್ಲ ಭಾರತಾಂಬೆಯ ಮಕ್ಕಳು ಎನ್ನುವ ದೃಷ್ಠಿಯಿಂದ ಇಸ್ಮಾಯಿಲ್ ತಮಟಗಾರ ಅಭಿಮಾನಿ ಬಳಗದ ವತಿಯಿಂದ ಸಿಂಗನಹಳ್ಳಿ ಗ್ರಾಮದಲ್ಲಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವತಃ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರು ಹಿಂದೂ, ಮುಸ್ಲಿಂ ಬಾಂಧವರಿಗೆ ಊಟ ಬಡಿಸಿ ಗಮನಸೆಳೆದರು. ನಾವೆಲ್ಲ ಒಂದೆ. ಇಲ್ಲಿ ಹಿಂದೂ, ಮುಸ್ಲಿಂ ಎಂಬ ಬೇಧ ಭಾವ ಬೇಡ ಎಂಬ ಸಂದೇಶವನ್ನು ಅವರು ಈ ಮೂಲಕ ಸಾರಿದರು.
Kshetra Samachara
16/04/2022 11:13 pm