ಹುಬ್ಬಳ್ಳಿ: ರಾಜ್ಯದೆಲ್ಲೆಡೆ ಇಂದು ಹನುಮ ಜಯಂತಿಯನ್ನ ಸಂಭ್ರಮದಿಂದಲೇ ಆಚರಿಸಲಾಗುತ್ತಿದೆ.ಆಂಜನೇಯನನ್ನ ಅಪಾರವಾಗಿ ನಂಬೋ ಭಕ್ತರು ಹುಬ್ಬಳ್ಳಿ ಧಾರವತಿಯ ಆಂಜನೇಯ ಟೆಂಪಲ್ ಗೂ ಆಗಮಿಸಿ ಹನುಮ ಜಯಂತಿ ವಿಶೇಷತೆಯಲ್ಲಿ ಭಾಗಿ ಆಗಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬೆಳಗ್ಗೆಯಿಂದಲೇ ಬಂದು ಆಂಜನೇಯನ ದರುಶನ ಪಡೆದಿದ್ದಾರೆ. ಪ್ರಸಾದವನ್ನೂ ಸ್ವೀಕರಿಸಿ ಪುನಿತರಾಗಿದ್ದಾರೆ. ವಿಶೇಷವೆಂದ್ರೆ ಧಾರವಾಡದಲ್ಲಿ ನುಗ್ಗಿಕೇರಿ ಹನುಮಂತನಿಗೆ ನಡೆದುಕೊಳ್ಳೋರು ಜಾಸ್ತಿ. ಅದೇ ರೀತಿನೇ ಧಾರವತಿಯ ಆಂಜನೇಯನನ್ನ ಕೂಡ ಜನ ನಂಬುತ್ತಾರೆ. ಭಕ್ತಿಯಿಂದಲೇ ನಡೆದುಕೊಳ್ತಾರೆ. ಇಲ್ಲಿರೋ ಬಸವನನ್ನ ಕೂಡ ಅಷ್ಟೇ ಆರಾಧಿಸುತ್ತಾರೆ. ಆಂಜನೇಯನ ಬೃಹತ ಪಾದುಕೆಗಳನ್ನೂ ತಮ್ಮ ದೇಹಕ್ಕೆ ಸ್ಪರ್ಶಿಸಿಕೊಂಡು ಪುನಿತರಾಗತ್ತಾರೆ. ಇಂತಹ ವಿಶೇಷಗಳ ಆಂಜನೇಯನ ಟೆಂಪಲ್ ನ ಇಂದಿನ ಸಂಭ್ರಮದ ಸ್ಟೋರಿ ಇಲ್ಲಿದೆ. ಬನ್ನಿ, ನೋಡೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/04/2022 04:17 pm