ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನುಗ್ಗಿಕೇರಿ ದೇಗುಲ ಗಲಾಟೆ ಸುಖಾಂತ್ಯ.. ರಥೋತ್ಸವ ಸಂಪನ್ನ

ಧಾರವಾಡ: ಕಳೆದ ಕೆಲವು ದಿನಗಳ ಹಿಂದಷ್ಟೇ ಪ್ರಸಿದ್ಧ ನುಗ್ಗಿಕೇರಿ ದೇವಸ್ಥಾನ ಸಾಕಷ್ಟು ಸುದ್ದಿಯಲ್ಲಿತ್ತು. ಅದಕ್ಕೆ ಮುಸ್ಲಿಂರು ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಬಾರದು ಎಂಬುದು. ಆದರೆ, ಈ ಎಲ್ಲ ಸಮಸ್ಯೆಗೆ ದೇವಸ್ಥಾನ ಟ್ರಸ್ಟ್ ಕಮಿಟಿಯವರು ತೆರೆ ಎಳೆದು ಇಂದು ಸಂಭ್ರಮದಿಂದ ಆಂಜನೇಯನ ತೇರು ಎಳೆದಿದ್ದಾರೆ.

ಹಿಂದೂ, ಮುಸ್ಲಿಂ ಯಾವ ವ್ಯಾಪಾರಿಯೂ ದೇವಸ್ಥಾನದ ಜಾಗದಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಬಾರದು ಎಂದು ತೀರ್ಮಾನ ಕೈಗೊಂಡಿದ್ದರಿಂದ ಅಲ್ಲಿನ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಎಲ್ಲಾ ವ್ಯಾಪಾರಿಗಳು ದೇವಸ್ಥಾನದ ಜಾಗ ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ಅಂಗಡಿಗಳನ್ನಿಟ್ಟು ವ್ಯಾಪಾರ ಆರಂಭಿಸಿದ್ದಾರೆ.

ಶನಿವಾರ ಹನುಮಜಯಂತಿ ಆಗಿದ್ದರಿಂದ ನುಗ್ಗಿಕೇರಿ ಆಂಜನೇಯನ ರಥೋತ್ಸವ ಸಂಭ್ರಮದಿಂದ ಜರುಗಿತು. ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಪೂಜಾ ವಿಧಿ ವಿಧಾನಗಳು ನಡೆದವು. ನಂತರ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು. ಆಂಜನೇಯನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.

ಮಧ್ಯಾಹ್ನದ ಹೊತ್ತಿಗೆ ಆಂಜನೇಯನ ತೇರನ್ನು ಎಳೆಯಲಾಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತೇರನ್ನೆಳೆದು ಪುನೀತರಾದರು. ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಘೋಷಣೆಗಳನ್ನು ಕೂಗಿ ತೇರಿಗೆ ಉತ್ತುತ್ತಿ, ಬಾಳೆಹಣ್ಣು ತೂರಿ ನಮನ ಸಲ್ಲಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ನುಗ್ಗಿಕೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ ಡ್ರೋನ್ ಕಣ್ಗಾವಲು ಕೂಡ ಹಾಕಲಾಗಿತ್ತು.

Edited By : Manjunath H D
Kshetra Samachara

Kshetra Samachara

16/04/2022 03:31 pm

Cinque Terre

44.88 K

Cinque Terre

8

ಸಂಬಂಧಿತ ಸುದ್ದಿ