ಹುಬ್ಬಳ್ಳಿ : ಸಮಾಜದಲ್ಲಿ ಹಿಂಸೆಯನ್ನು ಬಿಟ್ಟು ಅಹಿಂಸೆಯಿಂದ ಸನ್ಮಾರ್ಗದಲ್ಲಿ ನಡೆದರೆ ಜೀವನ ಸಾಕಾರವಾಗುವುದು ಎಂದು ದಿಗಂಬರ ಜೈನ್ ಸಾಧ್ವಿ ರಾಷ್ಟ್ರ ಸಂತ ಗುರುಮಾ ಗನೆನಿಹಾರಿಕಾ ಸುಪ್ರಕಾಶ ಸ್ಮೃತಿ ಮಾತಾಜೀ ಹೇಳಿದರು.
ಮಹಾವೀರ ಜಯಂತಿಯ ಪ್ರಯುಕ್ತ ಹುಬ್ಬಳ್ಳಿಯ ಮಹಾವೀರಗಲ್ಲಿಯ ಶಾಂತಿನಾಥ ಭವನದಲ್ಲಿ ನಡೆದ ಕಾರ್ಉಕ್ರಮದಲ್ಲಿ ಮಾತನಾಡಿದ ಅವರು ನಾಡಿನ ಜನತೆಗೆ ಜೈನ ಧರ್ಮದ ಮಹತ್ವದ ಸಂದೇಶವನ್ನು ತಿಳಿಸಿದರು.
ಜಾಗತಿಕವಾಗಿ ಮತ್ತು ವೈಯಕ್ತಿಕವಾಗಿ ಶಾಂತಿಯ ಅಗತ್ಯವಿದೆ. ಇದಲ್ಲದೆ ಪ್ರತಿಯೊಬ್ಬರ ಜತೆಯಲ್ಲಿಯೂ ಗೌರವಯುತವಾಗಿ ಮತ್ತು ದಯೆಯಿಂದ ವರ್ತಿಸಬೇಕು ಎಂದರು.
Kshetra Samachara
15/04/2022 09:08 am