ಕುಂದಗೋಳ : ಅಬ್ಬಾ ! ಎತ್ತ ನೋಡಿದರತ್ತ ಡೊಳ್ಳು ಮೇಳಗಳ ಸದ್ದು, ಧಾರ್ಮಿಕತೆಯ ಸಂಕೇತ, ಕೇಸರಿ ಧ್ವಜಗಳ ಹಾರಾಟ ಎಲ್ಲರಲ್ಲೂ ಉತ್ಸಾಹ ಜಾತ್ರೆಯ ಸವಿಯನ್ನು ಸವಿಯಲು ಸೇರಿದ ಜನ ಸಮೂಹ ಇಷ್ಟೆಲ್ಲಾ ದೃಶ್ಯಕ್ಕೆ ಸಾಕ್ಷಿಯಾದದ್ದು ಕುಂದಗೋಳ ಮತಕ್ಷೇತ್ರದ ಶರೇವಾಡ ಗ್ರಾಮ.
ಶರೇವಾಡ ಗ್ರಾಮದಲ್ಲಿ ಗ್ರಾಮದೇವಿ ದ್ಯಾಮವ್ವದೇವಿ, ದುರ್ಗಮ್ಮದೇವಿ ಚೌಕಿ ಮನೆಗೆ ಕೂರಿಸುವ ಕಾರ್ಯಕ್ರಮದ ಮೆರವಣಿಗೆಯ ಸಂದರ್ಭ ಶರೇವಾಡ ಗ್ರಾಮದಲ್ಲಿ ಹಬ್ಬದ ವಾತಾವರಣವೇ ಏರ್ಪಟ್ಟಿತು.
ಬೆಳಗಾವಿಯ ಡೋಲು ಬಾಜೆ ತಂಡದವರಿಂದ ನಡೆದ ಡೊಳ್ಳಿನ ಸದ್ದು ಗ್ರಾಮಸ್ಥರ ಭಕ್ತಿ ಪರಾಕಾಷ್ಠೆಗೆ ಮತ್ತಷ್ಟು ಇಂಬು ನೀಡಿತು. ತಾಯಿ ಗ್ರಾಮದೇವಿ ಜಾತ್ರಾ ಮೆರವಣಿಗೆ ಅತಿ ವಿಶೇಷವಾಗಿ ಗ್ರಾಮದಲ್ಲಿ ಸಂಚಾರ ಮಾಡಿ, ದುಷ್ಟಶಕ್ತಿಗಳ ನಾಶ ಸುಖ ಶಾಂತಿ ನೆಮ್ಮದಿ ಸಮೃದ್ಧಿ ದ್ಯೋತಕವಾಗಿ ಕಂಡಿತು.
Kshetra Samachara
13/04/2022 10:27 pm