ಹುಬ್ಬಳ್ಳಿ: ಹುಬ್ಬಳ್ಳಿ ಲವ್ ಜಿಹಾದ್ ಗೆ ಗುರಿಯಾದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಬರೆದ ಪತ್ರವನ್ನು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಸಮರ್ಥಿಸಿಕೊಂಡಿದ್ದಾರೆ.
ಸಾಮಾಜಿಕ ಬಹಿಷ್ಕಾರದ ಭಯ ಹುಟ್ಟಿದರೆ ಖಂಡಿತಾ ಸರಿ ಹೋಗುತ್ತದೆ. ಅದಕ್ಕಾಗಿಯೇ ಲವ್ ಜಿಹಾದ್ ಗೆ ಗುರಿಯಾಗುವ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು. ಅಂತಹ ಕುಟುಂಬಗಳಿಗೆ ದೇವಸ್ಥಾನ ಪ್ರವೇಶ ನೀಡಬಾರದು, ಅಂತಹವರಿಗೆ ಹೆಣ್ಣುಮಕ್ಕಳನ್ನು ಕೊಡುವುದು ಅಥವಾ ಅಂತಹ ಮನೆಯಿಂದ ಹೆಣ್ಣುಮಕ್ಕಳನ್ನು ತರುವ ಕಾರ್ಯ ಮಾಡಬಾರದು ಎಂಬುದನ್ನು ಸೇರಿದಂತೆ 5 ಅಂಶಗಳನ್ನು ಇಟ್ಟುಕೊಂಡು ಎಸ್.ಎಸ್.ಕೆ. ಸಮಾಜದ ಧರ್ಮದರ್ಶಿಗೆ ಪತ್ರ ಬರೆದಿದ್ದೇನೆ ಎಂದರು.
ಹೀಗೆ ಮಾಡದೇ ಇದ್ದಲ್ಲಿ ಇಂತಹ ಮತ್ತಷ್ಟು ಪ್ರಕರಣಗಳು ನಡೆಯುತ್ತವೆ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಧರ್ಮದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ತಪ್ಪೇನೂ ಇಲ್ಲ ಎಂದ ನಾಗೇಶ ಕಲಬುರ್ಗಿ ಸಮರ್ಥಿಸಿಕೊಂಡಿದ್ದಾರೆ.
Kshetra Samachara
09/04/2022 12:48 pm