ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಶಂಭುಲಿಂಗೇಶ್ವರನ ಜಾತ್ರಾ ಮಹೋತ್ಸವ ಸಾಯಂಕಾಲ ರಥೋತ್ಸವ

ಕುಂದಗೋಳ: ಕುಂದಗೋಳ ಪಟ್ಟಣದ ಆರಾಧ್ಯದೈವ ಪುರಾತನ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಇಂದು ಆರಂಭವಾಗಿದ್ದು ಸಾಯಂಕಾಲ ರಥೋತ್ಸವ ನೆರವೇರಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿ ಹಬ್ಬದ ನಂತರದ ಮೊದಲ ಸೋಮವಾರದಂದು ಶಂಭುಲಿಂಗೇಶ್ವರನ ಜಾತ್ರೆ ನೆರವೇರಲಿದೆ. ಇಂದು ಸೋಮವಾರ ಬೆಳಿಗ್ಗೆ ಶಂಭುಲಿಂಗೇಶ್ವರನಿಗೆ ಪೂಜಾಭಿಷೇಕ ಬಿಲ್ವಾರ್ಚನೆ ಮಹಾಪೂಜೆ ಸಲ್ಲಿಸಲಾಗಿದೆ.

ಸಾಯಂಕಾಲ ಶಿಥಿಕಂಠೇಶ್ವರ ಸ್ವಾಮೀಜಿ, ಅಭಿನವ ಕಲ್ಯಾಣಪುರ ಬಸವಣ್ಣನವರು, ಮಲ್ಲಯ್ಯ ಸ್ವಾಮಿಗಳು ಶಿವಾನಂದ ಮಠ ಇವರುಗಳ ದಿವ್ಯ ಸಾನಿಧ್ಯ ಹಾಗೂ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ನೇತೃತ್ವದಲ್ಲಿ ರಥೋತ್ಸವ ನೆರವೇರಲಿದೆ.

ಈಗಾಗಲೇ ಶಂಭುಲಿಂಗೇಶ್ವರನ ದರ್ಶನಕ್ಕೆ ಕುಂದಗೋಳ ಸೇರಿದಂತೆ ಹಳ್ಳಿಗಳಿಂದ ಭಕ್ತಾಧಿಗಳ ದಂಡು ಆಗಮಿಸುತ್ತಿದೆ. ಬರುವ ಭಕ್ತಾಧಿಗಳಿಗಾಗಿ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ದೀಪ, ತಳಿರು, ತೋರಣಗಳ ಅಲಂಕಾರದಲ್ಲಿ ದೇವಸ್ಥಾನದ ಕಂಗೊಳಿಸುತ್ತಿದೆ.

Edited By : Manjunath H D
Kshetra Samachara

Kshetra Samachara

04/04/2022 03:37 pm

Cinque Terre

13.35 K

Cinque Terre

0

ಸಂಬಂಧಿತ ಸುದ್ದಿ