ಕುಂದಗೋಳ: ಎಲ್ಲೆಡೆ ದೀಪಾಲಂಕಾರಗಳ ಸಂಭ್ರಮ. ಆ ಸಂಭ್ರಮದ ನಡುವೆ ಗ್ರಾಮದೇವತೆ ಜಾತ್ರೆಯ ಸೊಬಗು. ಜಾತ್ರೆಗೆ ಆಗಮಿಸುವ ಭಕ್ತಾಧಿಗಳ ದಂಡು.
ಯುಗಾದಿ ಹಬ್ಬದ ದಿನವೇ ಕುಂದಗೋಳ ತಾಲೂಕಿನ ಮೆತ್ತಿಗಟ್ಟಿ ಗ್ರಾಮದ ಗ್ರಾಮದೇವತೆ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನೆರವೇರಿದೆ. ಮರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಬೀದಿಗೆ ಸಂಪೂರ್ಣ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು, ದೇವಸ್ಥಾನದಲ್ಲಿ ಮರಿಯಮ್ಮದೇವಿಗೆ ಪೂಜಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಅದರಂತೆ ದೇವಸ್ಥಾನವನ್ನು ಸಹ ಅಲಂಕಾರ ಮಾಡಲಾಗಿದ್ದು, ಯುಗಾದಿ ಹಬ್ಬ ದಿನ ಇಂದು ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ.
Kshetra Samachara
02/04/2022 08:48 pm