ಅಣ್ಣಿಗೇರಿ:ಯುಗಾದಿ ಎಂದರೆ ಹಿಂದುಗಳಿಗೆ ಹೊಸ ವರ್ಷ. ಆದರೆ ಕಳೆದೆರಡು ವರ್ಷದಿಂದ ಯುಗಾದಿ ಹಬ್ಬಕ್ಕೆ ಕೊರೊನಾ
ಮಂಕು ಬಡಿದಿತ್ತು. ಈ ಸಲ ಹಾಗಿಲ್ಲ. ಸಾರ್ವಜನಿಕರು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ.
ತಾಲೂಕಿನ ಗ್ರಾಮಗಳಲ್ಲಿ ರೈತರು ಟ್ರ್ಯಾಕ್ಟರ್ ಎತ್ತುಗಳ ತೆಗೆದುಕೊಂಡು ಹೋಗಿ ಸೂರ್ಯ ಉದಯವಾಗುವ ಸಮಯದಲ್ಲಿ ಭೂತಾಯಿಗೆ ನಮಸ್ಕರಿಸಿ ಹೊಲ ಊಳುವುದು ವಾಡಿಕೆ ಇರುತ್ತದೆ. ಅದರಂತೆ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಿ ಉಳಿಮೆ ಮಾಡುತ್ತಾನೆ.
ರೈತರಿಗೆ ಇವತ್ತಿನಿಂದ ಹೊಸ ವರ್ಷ ಆರಂಭ ಆಗುತ್ತದೆ. ಈ ದಿನದಂದು ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ.
ನಂದೀಶ್ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
02/04/2022 11:33 am