ಹುಬ್ಬಳ್ಳಿ: ಕರ್ನಾಟಕದಲ್ಲಿ ಕೆಲವು ಸಂಘಟನೆಗಳು, ಸ್ವಾಮಿಗಳು ಜನರಲ್ಲಿ ಹೋಗಿ ನೀವು ಹಲಾಲ್ ತಿನ್ನಬೇಡಿ ಎಂದು ಹೇಳುತ್ತಿರುವುದು ತಪ್ಪು. ನಾವು ಏನಾದರೂ ತಿನ್ನುತ್ತೇವೆ, ಅದು ಇವರಿಗ್ಯಾಕೆ? ಎಂದು ಕಾಂಗ್ರೆಸ್ ಮುಖಂಡ ಅಶ್ಫಾಕ್ ಕುಮಟಾಕರ್ ಕಾಳಿ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಕಾಳಿ ಸ್ವಾಮಿ ಒಬ್ಬ ಕಾವಿ ದಾರಿ ಕೋಳಿ ಕತ್ತರಿಸಿದ್ದಾರೆ. ಸ್ವಾಮಿಗಳ ಧರಿಸುವ ಬಟ್ಟೆಗೆ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆ ಬಟ್ಟೆಗೆ ಗೌರವವಿದೆ. ಆದರೆ ಅವರು ಕೋಳಿ ಕತ್ತರಿಸಿ ಹಿಂದೂ ಸಮಾಜಕ್ಕೆ ಅವಮಾನಿಸಿದ್ದಾರೆ. ನಾವು ಹಲಾಲ್ ತಿನ್ನುತ್ತೇವೆ. ಮಟನ್, ಚಿಕನ್ ಮೀನು ಆದರೂ ತಿನ್ನುತ್ತೇವೆ. ನಮಗೆ ಬೇಕಾದ ಆಹಾರ ತಿನ್ನುತ್ತೇವೆ. ಅದನ್ನು ಕೇಳುವ ಹಕ್ಕು ನಿಮಗೆ ಇಲ್ಲ. ನೀವು ಬೇಕಾದ್ರೆ ಹರಾಮ್ ಜಟಕಾ ತಿನ್ನಿ ನಿಮಗೆ ಸ್ವಾತಂತ್ರವಿದೆ. ನಮಗೇನೂ ಅಭ್ಯಂತರ ಇಲ್ಲ. ಹಲಾಲ್ ವಿವಾದ ಸೃಷ್ಟಿಸಿದವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಇಲ್ಲಂದ್ರೆ ರಾಜ್ಯದಲ್ಲಿ ಇವರೆಲ್ಲರೂ ಸಮಾಜ ಒಡೆಯುವ ಕೆಲಸ ಮಾಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
01/04/2022 04:36 pm