ನವಲಗುಂದ : ತಾಲೂಕಿನ ಯಮನೂರು ಗ್ರಾಮದ ಚಾಂಗದೇವರ ಊರ್ಫ ರಾಜಾ ಬಾಗಸವಾರರ ಗಂಧಾಭಿಷೇಕದ ನಿಮಿತ್ತ ಯಮನೂರ ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣೆಹಳ್ಳದಿಂದ ನೀರನ್ನು ತರಲಾಯಿತು.
ಇನ್ನು ಗಂಧಾಭಿಷೇಕದಲ್ಲಿ ಮಹಾರಾಷ್ಟ್ರದಿಂದ ಬರುವ ವಿಶೇಷ ಸಂತರ ನೇತೃತ್ವದಲ್ಲಿ ದೇವಸ್ಥಾನದಿಂದ ಬೆಣ್ಣೆಹಳ್ಳದವರೆಗೆ ಪಲ್ಲಕ್ಕಿ ಹೊತ್ತು ಮೆರವಣಿಗೆ ನಡೆಸಲಾಯಿತು. ಎಲ್ಲಕ್ಕಿಂತ ವಿಶೇಷವೆಂದರೆ ಹಳ್ಳದಿಂದ ನೀರನ್ನು ತಂದು ಚಾಂಗದೇವನಿಗೆ ದೀಪ ಹಚ್ಚಲಾಯಿತು. ಈ ವೇಳೆ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಸೇರಿದಂತೆ ಅಧಿಕಾರಿಗಳು, ಪೊಲೀಸರು, ಭಕ್ತರು ಇದ್ದರು.
Kshetra Samachara
21/03/2022 06:52 pm