ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ರಾಮಲಿಂಗೇಶ್ವರ ಕಾಮಣ್ಣ ದೇವರ ದರ್ಶನಕ್ಕೆ ಮಧ್ಯರಾತ್ರಿಯಾದರೂ ನಿಲ್ಲದ ಜನಸಾಗರ

ನವಲಗುಂದ: ಐತಿಹಾಸಿಕ ನವಲಗುಂದದ ಶ್ರೀ ರಾಮಲಿಂಗೇಶ್ವರ ಕಾಮಣ್ಣನ ದೇವರ ದರ್ಶನಕ್ಕೆ ಮಧ್ಯರಾತ್ರಿಯಾದರೂ ಜನರು ಬರುವುದು ಮಾತ್ರ ಕಡಿಮೆಯಾಗುತ್ತಿಲ್ಲ.

ಕಳೆದ ಎರಡು ವರ್ಷಗಳಿಂದ ಕೊರೋನಾದ ಕರಿ ನೆರಳಿನಲ್ಲಿ ಜನರು ಬದುಕು ಸಾಗಿಸುವಂತೆ ಆಗಿತ್ತು. ಆದರೆ ಈ ವರ್ಷ ಯಾವುದೇ ತೊಂದರೆಗಳಿಲ್ಲದೆ ಹಬ್ಬ-ಹರಿದಿನಗಳು ಸರಳವಾಗಿ ನೆರವೇರುತ್ತಿರುವದರಿಂದ ಜನರು ಬರುವಿಕೆ ಹೇರಳವಾಗಿದೆ.

ಇನ್ನೂ ಸರದಿ ಸಾಲಿನಲ್ಲಿ ನಿಂತು ಶ್ರೀ ರಾಮಲಿಂಗೇಶ್ವರ ಕಾಮಣ್ಣನ ದೇವರ ದರ್ಶನ ಮಾಡುತ್ತಾ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಜನರು ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವೊಂದಿಷ್ಟು ಜನ ತಮ್ಮ ಹರಿಕೆಗಳು ಪೂರೈಸಲು ರಾಜ್ಯದ ನಾನಾ ಭಾಗಗಳಿಂದ ಬರುತ್ತಿದ್ದಾರೆ.

ಇನ್ನೂ ಇಲ್ಲಿಯ ವಿಶೇಷವೆಂದರೆ ಕಂಕಣಭಾಗ್ಯ,ಸಂತಾನ ಭಾಗ್ಯ, ಮಕ್ಕಳ ಭಾಗ್ಯ, ಹೀಗೆ ಹಲವಾರು ತರದ ಸಮಸ್ಯೆಗಳನ್ನು ಹೊತ್ತುಕೊಂಡ ಬರುವ ಜನರ ಸಮಸ್ಯೆಗಳನ್ನು ಇಲ್ಲಿನ ದೇವರು ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಇಲ್ಲಿದೆ.

ಒಟ್ಟಾರೆಯಾಗಿ ನವಲಗುಂದದ ಶ್ರೀ ರಾಮಲಿಂಗೇಶ್ವರ ಕಾಮಣ್ಣ ದೇವರ ರಾಜ್ಯ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೆಸರು ವಾಸಿಯಾಗಿದೆ.

Edited By : Shivu K
Kshetra Samachara

Kshetra Samachara

17/03/2022 01:00 pm

Cinque Terre

20.13 K

Cinque Terre

0

ಸಂಬಂಧಿತ ಸುದ್ದಿ