ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಂಡೇಲಿ ಕಾಡಿನಲ್ಲೊಂದು ಶಿವನ ಮಂದಿರ

ಅಳ್ನಾವರ : ಕಾಡು ಸುತ್ತುವವರು, ಚಾರಣ ಮಾಡುವವರಿಗೆ ಈ ಜಾಗ ಇಷ್ಟವಾಗುತ್ತೆ.ದಾಂಡೇಲಿ ಅಂದರೆನೇ ಕಾಡಿನಿಂದ ಕೂಡಿದ ಪ್ರದೇಶ.ಇಂತಹ ಕಾನನದೊಳಗೊಂದು ಐತಿಹಾಸಿಕವಾದ ಶಿವ ಮಂದಿರವಿದೆ.ಅದು ಕಾಣಿಸಿಕೊಂಡಿದ್ದು ಮೂವತ್ತು ವರ್ಷಗಳ ಹಿಂದೆ ಅಮೋಘಿ ಮುದರಿಕರ ಎನ್ನುವವರಿಗೆ.

ದಾಂಡೇಲಿ ಪೇಪರ್ ಮಿಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಇರುವ ಇವರು ಮೂವತ್ತು ವರ್ಷಗಳ ಹಿಂದೆ ಕಟ್ಟಿಗೆ ತರಲು ಹೋದಾಗ ಈ ಶಿವಲಿಂಗದ ದರ್ಶನ ವಾಗುತ್ತೆ.

ಅಂದಿನಿಂದ ಪ್ರತಿ ಸೋಮವಾರ ವಿಶೇಷ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.ಕಾಡಿನ ಮಧ್ಯದಲ್ಲಿರುವ ಪುಟ್ಟ ಶಿವಮಂದಿರದ ಸುತ್ತಮುತ್ತ ಕಲ್ಲಿನ ಕತ್ತನೆಯ ಮೂರ್ತಿಗಳು ಸೇರಿ ವಿವಿಧ ಕುರುಹುಗಳು ಕಂಡು ಬಂದಿವೆ.

ಕರೆಂಪ್ಪಪಾಳಿ,ತಾಟಗೂರ, ಆಲೂರ,ದಾಂಡೇಲಿ ಸೇರಿದಂತೆ ಬೇರೆ ಬೇರೆ ಭಾಗದ ಜನರು ಇಲ್ಲಿರುವ ಶಿವನ ದರ್ಶನಕ್ಕೆ ಬರುತ್ತಾರೆ.ಬಂದ ಭಕ್ತರೆಲ್ಲರಿಗೂ ಒಳ್ಳೆಯದಾಗಿದೆ,ಅವರೆಲ್ಲರ ಹರಕೆಗಳು ಈಡೇರಿವೆ ಎಂಬುದು ನಂಬಿಕೆಯ ಸಂಗತಿ.

ಹೀಗೆ 30 ವರ್ಷಗಳ ಹಿಂದೆ ಕಟ್ಟಿಗೆ ತರಲು ಹೋದವನ ಕಣ್ಣಿಗೆ ಕಂಡ ಶಿವನ ದೇವಸ್ಥಾನ ಇಂದು ಒಂದು ಹಂತಕ್ಕೆ ಬಂದಿದೆ. ಇಲ್ಲಿ ರಸ್ತೆ ಹಾಗೂ ನೀರಿನ ಸಮಸ್ಯೆಯಿದೆ. ಜನಪ್ರತಿನಿಧಿಗಳು ಅದನ್ನು ಪರಿಹರಿಸಿದರೆ ಭಕ್ತರು ಬರಲು ಇನ್ನಷ್ಟು ಅನುಕೂಲವಾಗುತ್ತೆ ಅನ್ನೋದು ಶಿವನ ಪೂಜೆ ಮಾಡಿಕೊಂಡು ಬರುತ್ತಿರುವ ಅಮೋಘಿ ರೇವಣಸಿದ್ದಪ್ಪ ಮುದರಿಕರ ಅವರ ಮನವಿ.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Shivu K
Kshetra Samachara

Kshetra Samachara

09/03/2022 11:59 am

Cinque Terre

26.05 K

Cinque Terre

6

ಸಂಬಂಧಿತ ಸುದ್ದಿ