ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊಟಬಾಗಿ ಗ್ರಾಮದಲ್ಲಿ ರುದ್ರಸ್ವಾಮಿ ಜಾತ್ರೆ ಸಂಭ್ರಮ

ಧಾರವಾಡ: ಹಳ್ಳಿಯ ಜನತೆಗೆ ಜಾತ್ರೆಗಳೆಂದರೆ ಎಲ್ಲಿಲ್ಲದ ಸಂಭ್ರಮ. ಗ್ರಾಮ‌ದ‌ ಸಮಸ್ತ ಜನತೆ‌ ಒಮ್ಮತದಿಂದ ಜಾತ್ರೆ ಆಚರಿಸುತ್ತಾರೆ. ಅದರಂತೆ ಧಾರವಾಡ ತಾಲ್ಲೂಕಿನ ಕೊಟಬಾಗಿ ಗ್ರಾಮದಲ್ಲಿ ಶ್ರೀ ರುದ್ರಸ್ವಾಮಿಯ ಜಾತ್ರೆ ಹಾಗೂ ರಥೋತ್ಸವ ಸಂಭ್ರಮದಿಂದ ನಡೆಯಿತು.

ಹಟಯೋಗಿ ಶ್ರೀ ರುದ್ರಸ್ವಾಮಿಯ ಜಾತ್ರೆಯನ್ನು ಈ ಊರಿನ ಜನ ನೂರಾರು ವರ್ಷಗಳಿಂದ ಆಚರಿಸುತ್ತ ಬಂದಿದ್ದಾರೆ. ಮತ್ತು ಭಕ್ತಿ‌ಭಾವಗಳಿಂದ ನಡೆದುಕೊಳ್ಳುತ್ತಾರೆ. ತೇರಿನ‌ ಮುಂದೆ ಶಿವಸ್ವರೂಪ ರುದ್ರಸ್ವಾಮಿ ಪಲ್ಲಕ್ಕಿ ಸಾಗುತ್ತದೆ ಅದರ ಹಿಂದೆ ರಥ ಸಾಗುತ್ತೆ. ಇನ್ನು ಜಾತ್ರೆಯ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.

ಕಳೆದ ವರ್ಷ ಕೋವಿಡ್ ಕಾರಣದಿಂದ ಜಾತ್ರೆ ವಿಳಂಬವಾಗಿತ್ತು. ಹಾಗೂ ನೀರಸವಾಗಿತ್ತು. ಆದ್ರೆ ಈ ಬಾರಿ ರುದ್ರಸ್ವಾಮಿ ಜಾತ್ರೆಯು ನಿರೀಕ್ಷೆಯಂತೆ ಅದ್ಧೂರಿಯಾಗಿ‌ ನಡೆದಿದೆ.

Edited By : Shivu K
Kshetra Samachara

Kshetra Samachara

04/03/2022 04:06 pm

Cinque Terre

23.36 K

Cinque Terre

0

ಸಂಬಂಧಿತ ಸುದ್ದಿ