ಹುಬ್ಬಳ್ಳಿ: ಮಹಾ ಶಿವರಾತ್ರಿ ಅಂಗವಾಗಿ ರಂಗೋಲಿಯಲ್ಲಿ ಶಿವಲಿಂಗವನ್ನು ಬಿಡಿಸುವ ಮೂಲಕ ವೀಣಾ ಅನಿಲ್ ಜರಳಿ ಅವರು ಶಿವರಾತ್ರಿಯನ್ನು ವಿಶೇಷವಾಗಿ ಶಿವನ ಆರಾಧನೆ ಮಾಡಿ ಈಗ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಹೌದು. ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದಾಗಿ ಶಿವರಾತ್ರಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಆದರೆ ಈಗ ಕೊರೊನಾ ಹಾವಳಿ ಕಡಿಮೆ ಆಗಿದ್ದು, ಪ್ರತಿಯೊಬ್ಬರೂ ಅರ್ಥಪೂರ್ಣವಾಗಿ ಆಚರಸಲು ಮುಂದಾಗಿದ್ದಾರೆ. ಅದರಂತೆ ಹುಬ್ಬಳ್ಳಿ ವಿದ್ಯಾನಗರ ನಿವಾಸಿ ವೀಣಾ ಅನಿಲ್ ಜರಳಿ ಎಂಬ ಮಹಿಳೆ ತಮ್ಮ ಮನೆಯ ಮುಂದೆ ರಂಗೋಲಿ ಮೂಲಕ ಶಿವಲಿಂಗವನ್ನು ಬಿಡಿಸಿದ್ದಾರೆ.
Kshetra Samachara
01/03/2022 06:06 pm