ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿಂದು ಮಹಾ ಶಿವರಾತ್ರಿಯ ಜಾತ್ರಾ ಮಹೋತ್ಸವದಂಗವಾಗಿಯೇ ಸಕಲ ಸಿದ್ಧತೆ ಆರಂಭಗೊಂಡಿದೆ.ಮಠದ ಪಾಠ ಶಾಲೆಯ ವಿದ್ಯಾರ್ಥಿಗಳು ಬೃಹತ್ ತೇರನ್ನ ಸಿದ್ಧಗೊಳಿಸುತ್ತಿದ್ದಾರೆ. ಸೋಮವಾರ ಆಗಿರೋದ್ರಿಂದ ಭಕ್ತರ ಸಂಖ್ಯೆನೂ ಇಲ್ಲಿ ಎಂದಿಗಿಂತ ಹೆಚ್ಚೆ ಇದೆ. ಬನ್ನಿ, ನೋಡೋಣ
ಹುಬ್ಬಳ್ಳಿ ಮಂದಿಗೆ ಶಿವರಾತ್ರಿ ಬಂದ್ರೆ ಮೊದಲು ನೆನಪಿಗೆ ಬರೋದೇ ಶ್ರೀ ಸಿದ್ಧಾರೂಢ ಮಠ. ಈ ಮಠದಲ್ಲಿ ಶಿವರಾತ್ರಿಗೇನೆ ವಿಶೇಷ ರಥೋತ್ಸವ ನಡೆಯುತ್ತದೆ. ಅದರಂತೆ ಈ ವರ್ಷವೂ ರಥೋತ್ಸವ ಇರುತ್ತದೆ. ಈಗಾಗಲೇ ಎಲ್ಲ ತಯಾರಿ ನಡೆದಿದೆ.
ಮಾರ್ಚ್-2 ರಂದು ಶ್ರೀ ಸಿದ್ಧಾರೂಢ ರಥೋತ್ಸವ ಇರುತ್ತದೆ. ಬೃಹತ್ ರಥದ ಅಲಂಕಾರದ ಕೆಲಸವೂ ಆರಂಭವಾಗಿದೆ. ಪಾಠ ಶಾಲೆ ಹಳೆ ವಿದ್ಯಾರ್ಥಿಗಳು ಇಂದಿನಿಂದಲೇ ರಥದ ಅಲಂಕಾರ ಕೆಲಸ ಶುರು ಮಾಡಿದ್ದಾರೆ.
ಕಳೆದ ವರ್ಷದಿಂದ ಯಾವುದೇ ಜಾತ್ರೆಗಳು ಅಷ್ಟೊಂದು ವೈಭವದಿಂದ ಆಗಿರಲಿಲ್ಲ. ಈ ವರ್ಷ ಎಲ್ಲವೂ ಸರಿಯಾಗಿದೆ ಅನ್ನೋ ಭಾವನೆ ಜನರಲ್ಲಿ ಮೂಡುತ್ತಿದೆ. ಸಿದ್ಧಾರೂಢ ಜಾತ್ರೆನೂ ಅತೀ ವಿಜೃಂಭಣೆಯಿಂದಲೇ ಜರುಗಲಿದೆ.
-ರೇವನ್ .ಪಿ.ಜೇವೂರ್, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
28/02/2022 11:00 am