ಕುಂದಗೋಳ : ಹರ ಹರ ಮಹಾದೇವ, ಹರ ಹರ ಮಹಾದೇವ..! ಎಂಬ ಘೋಷಗಳ ಮಧ್ಯೆ ಕುಂದಗೋಳ ತಾಲೂಕಿನ ಪಶುಪತಿಹಾಳದ ಗ್ರಾಮದ ಶ್ರೀ ಮೃತ್ಯುಂಜಯಪ್ಪನವರ ಮಹಾ ರಥೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿತು.
ಹೌದು ! ಶರಣ ಸಂಸ್ಕೃತಿಯ ಪಾವನ ತಾಣವಾದ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಲಿಂಗೈಕ್ಯ ಪೂಜ್ಯ ತ್ರಿವಿಧ ದಾಸೋಹಿ ಶ್ರೀ ಮೃತ್ಯುಂಜಯಪ್ಪನವರ 58ನೇ ಸ್ಮರಣೋತ್ಸವದ ನೆನಪಿನಲ್ಲಿ ನಡೆದ ರಥೋತ್ಸವಕ್ಕೆ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತೆಂಗಿನಕಾಯಿ ಒಡೆಯುವ ಮೂಲಕ ಜಾತ್ರೆಗೆ ಚಾಲನೆ ನೀಡಿ ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದರು.
ಡೊಳ್ಳು ಮೇಳ, ಜಾಂಜ್ ಪಾಥಕ ಹಾಗೂ ವಿವಿಧ ಸಂಗೀತ ವಾದ್ಯಮೇಳದೊಂದಿಗೆ ರಥೋತ್ಸವ ಪಶುಪತಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ಭಕ್ತರು ಪೂಜೆ ಸಲ್ಲಿಸಿ, ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಕಂಪ್ಲಿಯ ಮಹಾಂತದೇವರು, ಕೆರೂರು ಮುರುಘಾಮಠದ ಸಚಿನ್ ದೇವರು ವಿರಾಜಮಾನರಾಗಿ ಬೆಳ್ಳಿಯ ಕುದುರೆ ಸಾರೂಟ ಯಾತ್ರೆ ಆಕರ್ಷಣೆಯಾಗಿ ಜಾತ್ರೆಗೆ ವಿಶೇಷ ಮೆರಗು ನೀಡಿತು.
ರಥೋತ್ಸವದಲ್ಲಿ ವಿವಿಧ ಮಠಾದೀಶರು ಹಾಗೂ ಭಕ್ತರು ಪಾಲ್ಗೊಂಡಿದ್ದರು, ಜಾತ್ರಾ ಮಹೋತ್ಸವವು ಗ್ರಾಮದಲ್ಲಿ ಧಾರ್ಮಿಕ ಕಳೆ ಬಿಂಬಿಸಿತು.
Kshetra Samachara
26/02/2022 05:14 pm