ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಭಕ್ತರಿಂದ ತುಂಬಿ ತುಳುಕಿದ ಧಾರವಾಡದ ಗಣಪತಿ ದೇವಸ್ಥಾನ

ಧಾರವಾಡ: ಧಾರವಾಡದ ಕರ್ನಾಟಕ ಕಾಲೇಜು ವೃತ್ತದಲ್ಲಿರುವ ವಿದ್ಯಾಗಣೇಶ ದೇವಸ್ಥಾನ ಶುಕ್ರವಾರ ಅಕ್ಷರಶಃ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಸಾಲು ಸಾಲಾಗಿ ಬಂದ ಭಕ್ತರು ವಿಘ್ನ ನಿವಾರಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ವಿಘ್ನಗಳು ಎದುರಾಗದಂತೆ ಬೇಡಿಕೊಂಡರು. ಗಣೇಶ ಜಯಂತಿ ಹಾಗೂ ಮಂದಿರದ 34ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕಾಕಡಾರತಿ, ರಜತಕವಚ ಅಲಂಕಾರ, ಗಣಹೋಮ, ಬೆಣ್ಣೆಪೂಜೆ, ತೊಟ್ಟಿಲೋತ್ಸವ, ಪಲ್ಲಕ್ಕಿ ಸೇವೆ, ಮಹಾಮಂಗಳಾರುತಿ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರೂ ಕೂಡ ವಿದ್ಯಾ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.

Edited By : Manjunath H D
Kshetra Samachara

Kshetra Samachara

04/02/2022 08:34 pm

Cinque Terre

16.23 K

Cinque Terre

2

ಸಂಬಂಧಿತ ಸುದ್ದಿ