ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮನೆಗಳಿಗೆ ಬಾಗಿಲೇ ಇಲ್ಲಿದ ಊರಿಗೆ ದಾವಲ್ ಮಲ್ಲಿಕ್ ರಕ್ಷ.!

ಗದಗ: ಇದು ಮನೆಗಳಿಗೆ ಬಾಗಿಲುಗಳೇ ಇಲ್ಲದ ಊರು. ಹೀಗೆ ಅದೆಷ್ಟೊ ವರ್ಷಗಳು ಉರುಳಿದರೂ ಇಲ್ಲಿವರೆಗೂ ಇಲ್ಲಿ ಕಳತನವೇ ಆಗಿಲ್ಲ. ಕಾರಣ ದಾವಲ್ ಮಲ್ಲಿಕ್ ಈ ಊರಿನ ರಕ್ಷ. ಈ ದೇವರೆ ಎಲ್ಲರನ್ನ ಕಾಯ್ತಿದ್ದಾನೆ ಎಂಬ ಅಪಾರ ನಂಬಿಕೆ ಈ ಊರಿನ ಜನರದ್ದು. ಇಂತಹ ಈ ವಿಶೇಷ ಊರಲ್ಲಿ ನಿಮ್ಮ PublicNext ಒಂದು ವಿಶೇಷ Story ಮಾಡಿದೆ. ಬನ್ನಿ ನೋಡೋಣ.

ಇದು ದಾವಲ್ ಮಲ್ಲಿಕ್ ಪಹಾಡ್. ಇದನ್ನ ದಾವಲ್ ಮಲ್ಲಿಕ್ ಗುಡ್ಡ ಅಂತಲೂ ಕರೀತಾರೆ. 80 ರಿಂದ 90 ಮನೆ ಇರೋ ಈ ಪುಟ್ಟ ಊರಲ್ಲಿರೋ ಮನೆಗಳಿಗೆ ಬಾಗಿಲುಗಳೇ ಇಲ್ಲ.

ದಾವಲ್ ಮಲ್ಲಿಕ್ ದರ್ಗಾ ಈ ಒಂದು ಪವಾಡದಿಂದಲೇ ಈಗಲೂ ಹೆಚ್ಚು ಗುರುತಿಸಿಕೊಳ್ಳುತ್ತದೆ. ಆದರೆ ಇಲ್ಲಿ ಜಾತಿಯ ಹಂಗೇ ಇಲ್ಲದೆ ಎಲ್ಲ ಧರ್ಮದವರೂ ಭಕ್ತಿ-ಭಾವದಿಂದಲೇ ಗುಡ್ಡದ ಮೇಲೆ ಇರೋ ದಾವಲ್ ಮಲ್ಲಿಕ್ ಗೆ ನಡೆದು ಕೊಳ್ಳುತ್ತಾರೆ. ಹರಕೆ ಹೊತ್ತು ಇಷ್ಟಾರ್ಥಗಳನ್ನೂ ಪೂರೈಸಿಕೊಳ್ತಾರೆ.

ದಾವಲ್ ಮಲ್ಲಿಕ್ ದರ್ಗಾ ಇರೋದು ಗದಗ ಜಿಲ್ಲೆಯ ಮುಳಗುಂದ ಊರಿನಲ್ಲಿ. ಇಲ್ಲಿಗೆ ದೂರದ ಹುಬ್ಬಳ್ಳಿಯಿಂದಲೂ ಭಕ್ತರು ಬರುತ್ತಾರೆ. ಪ್ರತಿ ತಿಂಗಳ ಅಮವಾಸ್ಯ ದಿನಗಳಲ್ಲಿ ಭಕ್ತರ ಸಂಖ್ಯೆ ಇಲ್ಲಿ ಹೆಚ್ಚಿರುತ್ತದೆ. ಇಲ್ಲಿಗೆ ಬರುವ ಭಕ್ತರು ಸಮೀಪದಲ್ಲೆ ಇರೋ ಹಾಲವರ್ತಿಯ ಹೊಂಡದಲ್ಲೂ ಸ್ನಾನ ಮಾಡಿ, ದಾವಲ್ ಮಲ್ಲಿಕ್ ದರುಶನ ಪಡೆದು ಪುನಿತರಾಗುತ್ತಾರೆ.

Edited By : Manjunath H D
Kshetra Samachara

Kshetra Samachara

29/01/2022 12:33 pm

Cinque Terre

47.46 K

Cinque Terre

9

ಸಂಬಂಧಿತ ಸುದ್ದಿ